ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಬಳಿಕ ನೋಡುವ ದೃಷ್ಟಿ ಬದಲಾಯಿತು: ಸುಶೀಲ್ ಕುಮಾರ್ ಒಲಿಂಪಿಕ್ಸ್‌ನಲ್ಲಿ ಎರಡು ವೈಯಕ್ತಿಕ ಪದಕಗಳನ್ನು ಗೆದ್ದ ಏಕೈಕ ಕ್ರೀಡಾಪಟು ಕುಸ್ತಿಪಟು ಸುಶೀಲ್ ಕುಮಾರ್ ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬಳಿಕ ತಮ್ಮನ್ನು ಬೇರೆಯವರು ನೋಡುವ ದೃಷ್ಟಿ ಬದಲಾಯಿತು ಎಂದು ಹೇಳಿದ್ದಾರೆ. ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಎರಡು ವೈಯಕ್ತಿಕ ಪದಕಗಳನ್ನು ಗೆದ್ದ ಏಕೈಕ ಕ್ರೀಡಾಪಟು ಕುಸ್ತಿಪಟು ಸುಶೀಲ್ ಕುಮಾರ್ ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬಳಿಕ ತಮ್ಮನ್ನು ಬೇರೆಯವರು ನೋಡುವ ದೃಷ್ಟಿ ಬದಲಾಯಿತು ಎಂದು ಹೇಳಿದ್ದಾರೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್, "ಪದಕ ಗೆದ್ದ ನಂತರ, ನಾನು ಎಲ್ ಜಿ ಕಂಪನಿ ಹುಡುಕುತ್ತಿದ್ದೇ ಎಂದು ತಿಳಿಯಿತು. ಅಲ್ಲಿಯವರೆಗೆ ಎಲ್ ಜಿ ಎಂದರೆ ಏನೆಂದು ನನಗೆ ತಿಳಿದಿರಲಿಲ್ಲ. ಒಲಿಂಪಿಕ್ ಪದಕ ಗೆದ್ದ ನಂತರ ಎಲ್ಲರ ವರ್ತನೆ ಬದಲಾಯಿತು. ಮಕ್ಕಳು ಈಗ ದೇಶದಲ್ಲಿ ಚಿನ್ನ ಗೆಲ್ಲುವ ಬಗ್ಗೆ ಮಾತನಾಡುತ್ತಾರೆ. ಇಂತಹ ದೊಡ್ಡ ಬದಲಾವಣೆಯನ್ನು ನಾನು ದೇಶದಲ್ಲಿ ನೋಡಿದ್ದೇನೆ" ಎಂದಿದ್ದಾರೆ.