ಕಾಮನ್ವೆಲ್ತ್ ಗೇಮ್ಸ್ 2022: ಭಾರತಕ್ಕೆ ಮತ್ತೊಂದು ಪದಕ; ಬೆಳ್ಳಿ ಗೆದ್ದ ಜೂಡೋ ತಾರೆ ಸುಶೀಲಾ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದೂವರೆದಿದ್ದು, ನಾಲ್ಕನೇ ದಿನವಾದ ಸೋಮವಾರ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಜೂಡೋ ತಾರೆ ಎಲ್.ಸುಶೀಲಾ ದೇವಿ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದೂವರೆದಿದ್ದು, ನಾಲ್ಕನೇ ದಿನವಾದ ಸೋಮವಾರ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಜೂಡೋ ತಾರೆ ಎಲ್.ಸುಶೀಲಾ ದೇವಿ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ.ಮಣಿಪುರದ 27 ವರ್ಷದ ಸುಶೀಲಾ ದೇವಿ ಅವರು ಚಿನ್ನದ ಪದಕಕ್ಕಾಗಿ ಇಂದು ನಡೆದ ಜೂಡೋ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ವಿರುದ್ಧ ಸೋತಿದ್ದಾರೆ. ಈ ಮೂಲಕ ಸುಶೀಲಾ ದೇವಿ ಅವರು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.ಇದನ್ನು ಓದಿ: ಕಾಮನ್ ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ವೇಯ್ಟ್ ಲಿಫ್ಟರ್ ಅಚಿಂತ ಶಿವಲಿಸುಶೀಲಾ ದೇವಿ ಅವರ ಈ ಸಾಧನೆಯೊಂದಿಗೆ ಭಾರತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚು ಸಹಿತ ಏಳು ಪದಕಗಳನ್ನು ಪಡೆದುಕೊಂಡಿದೆ.ಮಣಿಪುರ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿರುವ ಸುಶೀಲಾ ದೇವಿ ಇದಕ್ಕೂ ಮೊದಲು ಮಲಾವಿಯ ಹ್ಯಾರಿಯೆಟ್ ಬೋನ್‌ಫೇಸ್ ವಿರುದ್ಧ ಜಯ ಗಳಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಸೆಮಿ ಫೈನಲ್‌ನಲ್ಲಿ ಮಾರಿಷಸ್‌ನ ಪ್ರಿಸ್ಸಿಲ್ಲಾ ಮೊರಾಂಡ್ ಅವರನ್ನು ಸೋಲಿಸಿ ಫೈನಲಿಗೆ ತಲುಪಿದ್ದರು. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದರು.