ಟೋಕಿಯೊ ಒಲಂಪಿಕ್ಸ್‌ 2020: 10 ಮೀ. ಪಿಸ್ತೂಲ್ ಫೈನಲ್‌ ನಲ್ಲಿ ಎಡವಿದ ಸೌರಭ್; ಅಪೂರ್ವ, ಇಲವೆನಿಲ್ ಔಟ್ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದ ಸೌರಭ್ ಚೌಧರಿ ಟೋಕಿಯೊ ಒಲಿಂಪಿಕ್ಸ್‌ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದು ಏಳನೇ ಸ್ಥಾನ ಗಳಿಸಿದ್ದಾರೆ. ಟೋಕಿಯೊ: ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದ ಸೌರಭ್ ಚೌಧರಿ ಟೋಕಿಯೊ ಒಲಿಂಪಿಕ್ಸ್‌ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದು ಏಳನೇ ಸ್ಥಾನ ಗಳಿಸಿದ್ದಾರೆ.ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಡವಿದ ಅವರು 137.4 ಅಂಕಗಳೊಂದಿಗೆ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.ಇದೇ ವೇಳೆ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಅಪೂರ್ವಿ ಚಾಂಡೆಲಾ(36ನೇ ಸ್ಥಾನ) ಮತ್ತು ಇಲವೆನಿಲ್(16ನೇ ಸ್ಥಾನ) ಪಡೆಯುವ ಮೂಲಕ ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.