ಏಷ್ಯನ್ ಕುಸ್ತಿ: ದೀಪಕ್ ಪುನಿಯಾಗೆ ಬೆಳ್ಳಿ, ಸಂಜಿತ್ ಗೆ ಕಂಚಿನ ಪದಕ ಕಝಕಿಸ್ಥಾನದ ಅಲ್ಮಾಟಿಯಲ್ಲಿ ಭಾನುವಾರ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಮುಕ್ತಾಯದ ದಿನದಂದು ಒಲಿಂಪಿಕ್ ಪದಕ ಭರವಸೆಯ ಭಾರತೀಯ ಕುಸ್ತಿಪಟು ದೀಪಕ್ ಪುನಿಯಾ 86 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಚೆನ್ನೈ: ಕಝಕಿಸ್ಥಾನದ ಅಲ್ಮಾಟಿಯಲ್ಲಿ ಭಾನುವಾರ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಮುಕ್ತಾಯದ ದಿನದಂದು ಒಲಿಂಪಿಕ್ ಪದಕ ಭರವಸೆಯ ಭಾರತೀಯ ಕುಸ್ತಿಪಟು ದೀಪಕ್ ಪುನಿಯಾ 86 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಇರಾನಿನ ಹಸನ್ ಯಜ್ದಾನಿಚರತಿ ಎದುರು ಪರಾಭವಗೊಂಡು ಪುನಿಯಾ ಎರಡನೇ ಸ್ಥಾನದಲ್ಲಿ ಉಳಿದಿದ್ದರು.ಭಾನುವಾರ ಭಾರತದ ಸಂಜಿತ್ (92 ಕೆಜಿ), ಅವರು ಕಂಚಿನ ಪದಕ ಗಳಿಸಿದ್ದರು. ಅವರು ಉಜ್ಬೇಕಿಸ್ತಾನ್‌ನ ರುಸ್ತಮ್ ಶೋಡೀವ್ ವಿರುದ್ಧ ಸೋಲು ಅನುಭವಿಸಿ ಮೂರನೇ ಸ್ಥಾನದಲ್ಲಿ ನಿಂತರು.ಒಟ್ಟಾರೆಯಾಗಿ, ಪುರುಷರ ಫ್ರೀ ಸ್ಟೈಲ್ ಸ್ಪರ್ಧೆಯಿಂದ ಭಾರತ ಏಳು ಪದಕಗಳನ್ನು ಗೆದ್ದಿದ್ದು, ರವಿ ದಹಿಯಾ (57 ಕೆಜಿ) ಏಕಮಾತ್ರ ಬಂಗಾರದ ಪದಕ ಜಯಿಸಿದ್ದಾರೆ.