ನಿಜ ಜೀವನದ ರಿಯಲ್ ಹೀರೋ: ಮನೆಯಿಲ್ಲದ ವೃದ್ಧನಿಗೆ ಹಣ ಸಹಾಯ ಮಾಡಿದ ಫುಟ್ಬಾಲ್ ಆಟಗಾರ, ವಿಡಿಯೋ! ಅದ್ಭುತ ಗೋಲ್ ಗಳನ್ನು ಹೊಡೆಯುವ ಮೂಲಕ ತಂಡಕ್ಕೆ ಆಪ್ಬಂಧವನಾಗಿರುವ ಲಿವರ್ ಪೂಲ್ ಫುಟ್ಬಾಲಿಗ ಮೊಹಮ್ಮದ್ ಸಲಾಹ್ ಮನೆಯಿಲ್ಲದ ನಿರ್ಗತಿಕರೊಬ್ಬರಿಗೆ ಹಣ ಸಹಾಯ ಮಾಡುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಇಂಗ್ಲೆಂಡ್: ಅದ್ಭುತ ಗೋಲ್ ಗಳನ್ನು ಹೊಡೆಯುವ ಮೂಲಕ ತಂಡಕ್ಕೆ ಆಪ್ಬಂಧವನಾಗಿರುವ ಲಿವರ್ ಪೂಲ್ ಫುಟ್ಬಾಲಿಗ ಮೊಹಮ್ಮದ್ ಸಲಾಹ್ ಮನೆಯಿಲ್ಲದ ನಿರ್ಗತಿಕರೊಬ್ಬರಿಗೆ ಹಣ ಸಹಾಯ ಮಾಡುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕ್ ಒಂದಕ್ಕೆ ಬಂದಿದ್ದ ಮೊಹಮ್ಮದ್ ಸಲಾಹ್ ಕೆಲ ಪುಂಡರು ನಿರ್ಗತಿಕ ವ್ಯಕ್ತಿಯೊಬ್ಬರಿಗೆ ಕಿರುಕುಳ ನೀಡುತ್ತಿರುವುದನ್ನು ನೋಡಿದ್ದಾರೆ. ಈ ವೇಳೆ ಅವರನ್ನು ಕರೆದು ಎಟಿಎಂನಿಂದ 100 ಪೌಂಡ್ ಹಣವನ್ನು ಡ್ರಾ ಮಾಡಿ ನೀಡಿದ್ದಾರೆ. , . £100 . ../rjPDtPVxViಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಟಗಾರ ಸಾಮಾಜಿಕ ಕಳಕಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.