ಮಹಿಳೆಯರ(ಹಿರಿಯ) ಹಾಕಿ ರಾಷ್ಟ್ರೀಯ ಶಿಬಿರಕ್ಕೆ 25 ಆಟಗಾರ್ತಿಯರ ಆಯ್ಕೆ ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರು ಆವರಣದಲ್ಲಿ ಮುಂಬರುವ ಹಾಕಿ ಮಹಿಳೆಯರ ರಾಷ್ಟ್ರೀಯ ಶಿಬಿರಕ್ಕೆ 25 ಆಟಗಾರ್ತಿಯರನ್ನು ಇಂಡಿಯಾ ಹಾಕಿ ಪ್ರಕಟಿಸಿದೆ. ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರು ಆವರಣದಲ್ಲಿ ಮುಂಬರುವ ಹಾಕಿ ಮಹಿಳೆಯರ ರಾಷ್ಟ್ರೀಯ ಶಿಬಿರಕ್ಕೆ 25 ಆಟಗಾರ್ತಿಯರನ್ನು ಇಂಡಿಯಾ ಹಾಕಿ ಪ್ರಕಟಿಸಿದೆ.ಈ ತಿಂಗಳ ಕೊನೆಯಲ್ಲಿ ಹಮ್ಮಿಕೊಳ್ಳಲಾಗುವ ನ್ಯೂಜಿಲೆಂಡ್ ಪ್ರವಾಸ ಪೂರ್ವ ಸಿದ್ಧತೆಗಾಗಿ 17 ದಿನಗಳ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಯ್ಕೆಯಾಗಿರುವ ಎಲ್ಲ ಆಟಗಾರ್ತಿಯರು ಮುಖ್ಯ ಕೋಚ್ ಜೋರ್ಡ್ ಮರಿಗ್ನೆ ಅವರ ಬಳಿ ವರದಿ ಮಾಡಿಕೊಳ್ಳಬೇಕಾಗಿದೆ.