ಕಾಮನ್ವೆಲ್ತ್ ಗೇಮ್ಸ್ 2022: ಭಾರತಕ್ಕೆ ಮೊದಲ ಪದಕ; ಬೆಳ್ಳಿ ಗೆದ್ದ ವೇಯ್ಟ್ ಲಿಫ್ಟರ್ ಸಂಕೇತ್ ಸರ್ಗರ್! ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಶುರುವಾಗಿದ್ದು ವೇಟ್ ಲಿಫ್ಟರ್ ಸಂಕೇತ್ ಸರ್ಗರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಶುರುವಾಗಿದ್ದು ವೇಟ್ ಲಿಫ್ಟರ್ ಸಂಕೇತ್ ಸರ್ಗರ್ ಬೆಳ್ಳಿ ಪದಕ ಗೆದ್ದಿದ್ದಾರೆ.55 ಕೆಜಿ ವಿಭಾಗದ ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ 248 ಕೆಜಿ ಭಾರ ಎತ್ತುವ ಮೂಲಕ 21 ವರ್ಷದ ಸಂಕೇತ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಇನ್ನು 249 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.ಮೊದಲ ಸ್ಥಾನದಲ್ಲಿದ್ದ ಸಂಕೇತ್ ನಂತರ ಗಾಯಗೊಂಡಿದ್ದರಿಂದ ಎರಡನೇ ಸುತ್ತಿನಲ್ಲಿ ಹೆಚ್ಚು ಭಾರ ಎತ್ತಲು ಸಾಧ್ಯವಾಗದೆ ಇದ್ದಿದ್ದೂ ಚಿನ್ನದ ಪದಕ ಕೈತಪ್ಪಲು ಕಾರಣವಾಯಿತು.ಕಳೆದ ಆವೃತ್ತಿಯಲ್ಲಿ, ಭಾರತೀಯ ಲಿಫ್ಟರ್‌ಗಳು ಐದು ಚಿನ್ನ ಸೇರಿದಂತೆ ಒಂಬತ್ತು ಪದಕಗಳನ್ನು ಗೆದ್ದು ಬೀಗಿದ್ದರು.ಇದನ್ನೂ ಓದಿ: : ಭಾರತ ವನಿತೆಯರ ತಂಡ ಶುಭಾರಂಭ; ಘಾನಾ ವಿರುದ್ಧ 5-0 ಭರ್ಜರಿ ಜಯಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸಂಕೇತ್ ಸರ್ಗರ್ ಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಸಂಕೇತ್ ಸರ್ಗರ್ ಅವರ ಅಸಾಧಾರಣ ಪ್ರಯತ್ನ! ಪ್ರತಿಷ್ಠಿತ ಬೆಳ್ಳಿ ಪದಕ ಗೆದ್ದಿರುವುದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಉತ್ತಮ ಆರಂಭವಾಗಿದೆ. ಅವರಿಗೆ ಅಭಿನಂದನೆಗಳು ಮತ್ತು ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಟ್ವೀಟಿಸಿದ್ದಾರೆ. ! . . ../Pvjjaj0IGm