ಕೆಡೆಟ್‌ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಪ್ರಿಯಾ ಮಲಿಕ್ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದಿದೆ. ಆದರೆ ಗೆದ್ದಿರುವುದು ಟೋಕಿಯೋದ ಒಲಂಪಿಕ್ಸ್ ನಲ್ಲಿ ಅಲ್ಲ. ಆದರೆ ಹಂಗೇರಿಯಲ್ಲಿ ನಡೆದ ಕೆಡೆಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ. ಹಂಗೇರಿ: ಭಾರತ ಮತ್ತೊಂದು ಚಿನ್ನದ ಪದಕ ಗೆದ್ದಿದೆ. ಆದರೆ ಗೆದ್ದಿರುವುದು ಟೋಕಿಯೋದ ಒಲಂಪಿಕ್ಸ್ ನಲ್ಲಿ ಅಲ್ಲ. ಆದರೆ ಹಂಗೇರಿಯಲ್ಲಿ ನಡೆದ ಕೆಡೆಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ. ಟೋಕಿಯೊ ಒಲಂಪಿನ್ಸ್ ನ ನಡುವೆ ಕೆಡೆಟ್‌ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಪ್ರಿಯಾ ಮಲಿಕ್ ಭಾರತೀಯರು ಹೆಮ್ಮೆ ಪಡುವುದಕ್ಕೆ ಮತ್ತೊಂದು ಕಾರಣವಾಗಿದ್ದಾರೆ. ಮಹಿಳೆಯರ 73 ಕೆ.ಜಿ ತೂಕದ ವಿಭಾಗದ ಫೈನಲ್ ಪಂದ್ಯದಲ್ಲಿ ಬೆಲಾರಸ್ ನ ಕುಸ್ತಿ ಪಟು ಕ್ಸೆನಿಯಾ ಪಟಪೋವಿಚ್ ಅವರನ್ನು 5-0 ಅಂತರದಿಂದ ಮಣಿಸಿದ್ದಾರೆ. ಟೋಕಿಯೋ ಒಪಂಪಿಕ್ಸ್ ನಲ್ಲಿ ಮೀರಾಬಾಯ್ ಚನು ಅವರು ಮಹಿಳೆಯರ 49 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಬೆನ್ನಲ್ಲೇ ಭಾರತಕ್ಕೆ ಕೆಡೆಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಒಲಂಪಿಕ್ಸ್ ಬೆಳ್ಳಿ ಪದಕ ದೇಶಕ್ಕೆ ಸಮರ್ಪಣೆ: ಮೀರಾಬಾಯಿ ಚಾನು