ಟೋಕಿಯೊದಲ್ಲಿ ಒಲಿಂಪಿಕ್ಸ್ 2020 ಆರಂಭಕ್ಕೆ ಇನ್ನು ಕೆಲವೇ ದಿನ ಬಾಕಿ, ಆಗಲೇ ಕೋವಿಡ್-19 ಮೊದಲ ಕೇಸು ಪತ್ತೆ! ಕೋವಿಡ್-19 ನಿರ್ಬಂಧ ಮತ್ತು ಭಯ, ಆತಂಕ ಮಧ್ಯೆ ಟೋಕಿಯೊ ಒಲಿಂಪಿಕ್ಸ್ 2020 ಈ ತಿಂಗಳ 23ರಂದು ಆರಂಭವಾಗುತ್ತಿದೆ. ಟೋಕಿಯೊ ಒಲಿಂಪಿಕ್ ಗ್ರಾಮದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಟೋಕ್ಯೋ: ಕೋವಿಡ್-19 ನಿರ್ಬಂಧ ಮತ್ತು ಭಯ, ಆತಂಕ ಮಧ್ಯೆ ಟೋಕ್ಯೋ ಒಲಿಂಪಿಕ್ 2020 ಈ ತಿಂಗಳ 23ರಂದು ಆರಂಭವಾಗುತ್ತಿದೆ. ಟೋಕಿಯೊ ಒಲಿಂಪಿಕ್ ಗ್ರಾಮದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.ಪಂದ್ಯ ನಡೆಯುವ ಟೋಕಿಯೊ ಗ್ರಾಮದಲ್ಲಿ ಕೋವಿಡ್-19 ಕೇಸು ಪತ್ತೆಯಾಗಿದ್ದು, ಇದರಿಂದ ಆಟಗಾರರು ವಿಚಲಿತರಾಗಬೇಕಿಲ್ಲ, ಸ್ಪರ್ಧಾಳುಗಳಿಗೆ ಪಂದ್ಯ ನಡೆಯುವ ಜಾಗ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಭರವಸೆ ನೀಡುವುದಾಗಿ ಸಂಘಟಕರು ಹೇಳಿದ್ದಾರೆ. ಇನ್ನು ಟೋಕಿಯೊ ಆರಂಭಕ್ಕೆ ಇರುವುದು ಕೇವಲ ಆರು ದಿನ. ಗ್ರಾಮದಲ್ಲಿ ಒಬ್ಬನಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸದ್ಯ ಸ್ಥಳದಲ್ಲಿ ಸಾವಿರಾರು ಅಥ್ಲೆಟ್ ಗಳು ಮತ್ತು ಅಧಿಕಾರಿಗಳು ಸೇರಿದ್ದಾರೆ, ತಪಾಸಣೆ ಮಾಡುವ ವೇಳೆ ಒಬ್ಬರಿಗೆ ಪಾಸಿಟಿವ್ ಬಂದಿದೆ ಸದ್ಯ ಪಾಸಿಟಿವ್ ಬಂದ ವ್ಯಕ್ತಿಯನ್ನು ಹೊಟೇಲ್ ರೂಂವೊಳಗೆ ಇರಿಸಲಾಗಿದೆ ಎಂದು ಟೋಕಿಯೊ ಸಂಘಟನಾ ಸಂಸ್ಥೆಯ ವಕ್ತಾರೆ ಮಾಸ ಟಕಯ ತಿಳಿಸಿದ್ದಾರೆ.ಇನ್ನು ಜಪಾನ್ ಮಾಧ್ಯಮ ವರದಿ ಮಾಡಿ ವಿದೇಶಿ ಪ್ರಜೆಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಹೇಳಿದೆ. ಕೋವಿಡ್ ಹೊಸ ಅಲೆ ಸೃಷ್ಟಿಯಾಗಬಹುದು ಎಂದು ಜಪಾನ್ ನ ಸ್ಥಳೀಯರು ಒಲಿಂಪಿಕ್ ಗೇಮ್ ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ಕೊರೋನಾ ಸೋಂಕು ಅತಿಯಾಗಿ ಕಂಡುಬಂದರೆ ತಕ್ಷಣವೇ ಕ್ರಮ ಕೈಗೊಳ್ಳಲು ಸಂಘಟಕರು ಮತ್ತು ಆಯೋಜಕರು ಸಿದ್ದರಾಗಿದ್ದಾರೆ ಎಂದು ಟೋಕಿಯೊ 2020ರ ಮುಖ್ಯ ಸಂಘಟಕಿ ಸೈಕೊ ಹಶಿಮೊಟೊ ತಿಳಿಸಿದ್ದಾರೆ.ಜುಲೈ 23ರಿಂದ ಆಗಸ್ಟ್ 8ರವರೆಗೆ ಟೋಕಿಯೊ 2020 ಒಲಿಂಪಿಕ್ ಪಂದ್ಯ ನಡೆಯಲಿದೆ.