2024: ಬ್ಯಾಡ್ಮಿಂಟನ್ ನಲ್ಲಿ ಭಾರತದ ಪ್ರಣಯ್ ಶುಭಾರಂಭ ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪ್ರಣಯ್ ಶುಭಾರಂಭ ಮಾಡಿದ್ದಾರೆ. ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪ್ರಣಯ್ ಶುಭಾರಂಭ ಮಾಡಿದ್ದಾರೆ.ಇಂದು ನಡೆದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಣಯ್ ಜರ್ಮನಿಯ ಫ್ಯಾಬಿಯನ್ ರಾತ್ ರನ್ನು 21-18, 21-12 ಅಂಕಗಳ ಅಂತರದಲ್ಲಿ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.ಅಂದಹಾಗೆ ಇದು ಪ್ರಣಯ್ ಗೆ ಚೊಚ್ಚಲ ಒಲಿಂಪಿಕ್ಸ್ ಆಗಿದ್ದು, ತಾವಾಡಿದ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸುವ ಮೂಲಕ ಪ್ರಣಯ್ ಭರವಸೆ ಮೂಡಿಸಿದ್ದಾರೆ.#ParisOlympics2024 | ' : ' . . ' 21-18, 21-12 (: ) ../pBmRdDp4Jj