ಮಲೇಷ್ಯಾ ಓಪನ್ 2022: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಪಿವಿ ಸಿಂಧು, ಎಚ್ಎಸ್ ಪ್ರಣಯ್! ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮಲೇಷ್ಯಾ ಓಪನ್‌ನಲ್ಲಿ ಥಾಯ್ಲೆಂಡ್‌ನ ಫಿಟ್ಟಾಯಪೋರ್ನ್ ಚೈವಾನ್ ವಿರುದ್ಧ ಜಯಗಳಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಕೌಲಾಲಂಪುರ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮಲೇಷ್ಯಾ ಓಪನ್‌ನಲ್ಲಿ ಥಾಯ್ಲೆಂಡ್‌ನ ಫಿಟ್ಟಾಯಪೋರ್ನ್ ಚೈವಾನ್ ವಿರುದ್ಧ ಜಯಗಳಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.ಆಕ್ಸಿಯಾಟಾ ಅರೆನಾದಲ್ಲಿ ನಡೆದ 57 ನಿಮಿಷಗಳ ಎರಡನೇ ಸುತ್ತಿನ ಹಣಾಹಣಿಯಲ್ಲಿ ವಿಶ್ವ ನಂ.7 ತನ್ನ ಥಾಯ್ ಎದುರಾಳಿಯನ್ನು 19-21 21-9 21-14 ರಿಂದ ಸೋಲಿಸಿದರು. ಏಳನೇ ಶ್ರೇಯಾಂಕದ ಭಾರತೀಯ ಆಟಗಾರ್ತಿ ಕ್ವಾರ್ಟರ್ ಫೈನಲ್ ನಲ್ಲಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಅವರನ್ನು ಎದುರಿಸಲಿದ್ದಾರೆ.ಇದನ್ನೂ ಓದಿ: ಥಾಮಸ್ ಕಪ್ 2022: ಭಾರತಕ್ಕೆ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ; ಇಂಡೋನೇಷ್ಯಾ ವಿರುದ್ಧ 3-0 ಗೆಲುವುಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.21 ಆಟಗಾರ ಎಚ್‌ಎಸ್ ಪ್ರಣಯ್ ಅವರು ಚೈನೀಸ್ ತೈಪೆಯ ನಾಲ್ಕನೇ ಶ್ರೇಯಾಂಕದ ಚೌ ಟಿಯೆನ್ ಚೆನ್ ವಿರುದ್ಧ 21-15 21-7 ಸುಲಭ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.ಥಾಮಸ್ ಕಪ್ ಭಾರತದ ಐತಿಹಾಸಿಕ ಪ್ರಶಸ್ತಿ ಗೆಲುವಿನಲ್ಲಿ ಒಬ್ಬರಾದ ಶ್ರೇಯಾಂಕ ರಹಿತ ಪ್ರಣಯ್ ಮುಂದಿನ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಅವರನ್ನು ಎದುರಿಸಲಿದ್ದಾರೆ.