ಭಾರತದ ಮಾಜಿ ಮಿಡ್‌ಫೀಲ್ಡರ್ ಕರ್ನಾಟಕ ಮೂಲದ ಕೃಷ್ಣಾಜಿ ರಾವ್ ನಿಧನ, ಎಐಎಫ್ಎಫ್ ಸಂತಾಪ ಭಾರತ ಫುಟ್ಬಾಲ್ ತಂಡದ ಮಾಜಿ ಮಿಡ್‌ಫೀಲ್ಡರ್ ಮತ್ತು ತರಬೇತುದಾರ ಕೃಷ್ಣಾಜಿ ರಾವ್ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ನವದೆಹಲಿ: ಭಾರತ ಫುಟ್ಬಾಲ್ ತಂಡದ ಮಾಜಿ ಮಿಡ್‌ಫೀಲ್ಡರ್ ಮತ್ತು ತರಬೇತುದಾರ ಕೃಷ್ಣಾಜಿ ರಾವ್ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಕೃಷ್ಣಾಜಿ ರಾವ್ ನಿಧನಕ್ಕೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ(ಎಐಎಫ್‌ಎಫ್‌) ಸಂತಾಪ ಸೂಚಿಸಿದೆ.ಕೃಷ್ಣಾಜೀ ರಾವ್ 1966 ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಹಿರಿಯರ ತಂಡಕ್ಕೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಿದರು.ಇನ್ನು 1967 ರಂಗೂನ್(ಈಗ ಯಾಂಗೂನ್) ನಲ್ಲಿ ನಡೆದ ಏಷ್ಯನ್ ಕಪ್ ಅರ್ಹತಾ ಪಂದ್ಯಗಳಲ್ಲಿ ಮತ್ತು 1968 ರ ಕೌಲಾಲಂಪುರದಲ್ಲಿ ನಡೆದ ಮೆರ್ಡೆಕಾ ಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದರು, ಇದರಲ್ಲಿ ಅವರು ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದರು.