ಯುಎಸ್ ಓಪನ್ 2020: ಪುರುಷರ ಡಬಲ್ಸ್ ಎರಡನೇ ಸುತ್ತಿಗೆ ರೋಹನ್ ಬೋಪಣ್ಣ ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಅಮೆರಿಕದ ಜೋಡಿ ಅರ್ನೆಸ್ಟೊ ಎಸ್ಕೊಬೆಡೊ ಮತ್ತು ನೋವಾ ರುಬಿನ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಇಂಡೋ-ಕೆನಡಿಯನ್ ಜೋಡಿ ರೋಹನ್ ಬೋಪಣ್ಣ ಮತ್ತು ಡೆನಿಸ್ ಶಪೋವೊಲೊವ್ ಯುಎಸ್ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ನ್ಯೂಯಾರ್ಕ್: ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಅಮೆರಿಕದ ಜೋಡಿ ಅರ್ನೆಸ್ಟೊ ಎಸ್ಕೊಬೆಡೊ ಮತ್ತು ನೋವಾ ರುಬಿನ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಇಂಡೋ-ಕೆನಡಿಯನ್ ಜೋಡಿ ರೋಹನ್ ಬೋಪಣ್ಣ ಮತ್ತು ಡೆನಿಸ್ ಶಪೋವೊಲೊವ್ ಯುಎಸ್ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.ಶುಕ್ರವಾರ ಒಂದು ಗಂಟೆ 22 ನಿಮಿಷಗಳ ಕಾಲ ನಡೆದ ಟೂರ್ನಮೆಂಟ್ ಓಪನರ್‌ನಲ್ಲಿ ಬೋಪಣ್ಣ ಮತ್ತು ಡೆನಿಸ್ ಶಪೋವೊಲೊವ್ ಅಮೆರಿಕದ ಎದುರಾಳಿಗಳನ್ನು 6-2, 6-4 ಸೆಟ್‌ಗಳಿಂದ ಸೋಲಿಸಿದರು.ಇಂಡೋ-ಕೆನಡಿಯನ್ ಜೋಡಿ ಈಗ ಆರನೇ ಶ್ರೇಯಾಂಕಿತರಾದ ಕೆವಿನ್ ಕ್ರಾವಿಯೆಟ್ಜ್ ಮತ್ತು ಆಂಡ್ರಿಯಾಸ್ ಮೈಸ್ ಅವರನ್ನು ಎದುರಿಸಲಿದೆಸುಮಿತ್ ನಗಾಲ್ ಮತ್ತು ದಿವಿಜ್ ಶರಣ್ ಅವರ ನಿರ್ಗಮನದ ನಂತರ ಟೂರ್ನಿಯಲ್ಲಿ ಉಳಿದಿರುವ ಏಕೈಕ ಭಾರತೀಯ ಬೋಪಣ್ಣ. ಅವರಾಗಿದ್ದಾರೆ. ವಿಶ್ವದ 3 ಮತ್ತು ಎರಡನೇ ಶ್ರೇಯಾಂಕಿತ ಆಸ್ಟ್ರಿಯಾದ ಡಾಮಿನಿಕ್ ಥೀಮ್ ವಿರುದ್ಧ ಸೋತ ನಂತರ ಎರಡನೇ ಸುತ್ತಿನಲ್ಲಿ ಸುಮಿತ್ ನಗಾಲ್ ಟೂರ್ನಿಯಿಂದ ಹೊರಬಿದ್ದಿದ್ದರು.