ಟೋಕಿಯೊ ಪ್ಯಾರಲಿಂಪಿಕ್ಸ್: ಗೆದ್ದಿದ್ದ ಕಂಚಿನ ಪದಕ ಕಳೆದುಕೊಂಡ ಭಾರತದ ಅಥ್ಲೀಟ್ ವಿನೋದ್ ಕುಮಾರ್! ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದ ಗೆದ್ದಿದ್ದ ಭಾರತದ ವಿನೋದ್ ಕುಮಾರ್ ತಮ್ಮ ಪದಕ ಕಳೆದುಕೊಂಡಿದ್ದಾರೆ. ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದ ಗೆದ್ದಿದ್ದ ಭಾರತದ ವಿನೋದ್ ಕುಮಾರ್ ತಮ್ಮ ಪದಕ ಕಳೆದುಕೊಂಡಿದ್ದಾರೆ.ಪ್ಯಾರಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎಫ್52 ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ವಿನೋದ್‌ ಕುಮಾರ್‌ 19.91 ಮೀ. ದೂರದ ಸಾಧನೆಗೈದು ಕಂಚಿನ ಪದಕ ಗೆದ್ದಿದ್ದರು. ಇದು ಏಷ್ಯನ್‌ ಪ್ಯಾರಾ ದಾಖಲೆಯಾಗಿತ್ತು. ಆದರೆ ವಿನೋದ್‌ ಕುಮಾರ್‌ ಕಂಚಿನ ಪದಕದ ಜಯಕ್ಕೆ ಇತರ ದೇಶಗಳ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಇತರೆ ಸ್ಪರ್ಧಿಗಳ ಆಕ್ಷೇಪದ ಪ್ರಕಾರ ವಿನೋದ್‌ ಎಫ್52 ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ ಎಂದು ವಾದಿಸಿದ್ದರು. ಹೀಗಾಗಿ ಫ‌ಲಿತಾಂಶವನ್ನು ಸೋಮವಾರ ಪ್ರಕಟಿಸಲು ಸಮಿತಿ ನಿರ್ಧರಿಸಲಾಗಿತ್ತು. ಆದರಂತೆ ಇಂದು ಇದರ ಫಲಿತಾಂಶ ಪ್ರಕಟವಾಗಿದ್ದು, ವಿನೋದ್ ಕುಮಾರ್ ಸ್ಪರ್ಧೆಯನ್ನು ಅನೂರ್ಜಿತಗೊಳಿಸಿ ಪದಕವನ್ನು ವಾಪಸ್ ಪಡೆಯಲಾಗುತ್ತಿದೆ. ಇನ್ನು ಈ ವಿಚಾರವಾಗಿ ಮಾತನಾಡಿರುವ ಸಂಘಟಕರು, 'ಭಾರತದ ಕ್ರೀಡಾಪಟು ವಿನೋದ್ ಕುಮಾರ್ ಅವರನ್ನು ಕ್ರೀಡಾ ವರ್ಗದೊಂದಿಗೆ ನಿಯೋಜಿಸಲು ಸಮಿತಿಗೆ ಸಾಧ್ಯವಾಗಿರಲಿಲ್ಲ. ಅವರ ಕ್ರೀಡಾಪಟು ವರ್ಗೀಕರಣ ಪ್ರಕ್ರಿಯೆ ಪೂರ್ಣಗೊಂಡಿಲ್ಲ (). ಇದೇ ಕಾರಣಕ್ಕಾಗಿ ಕ್ರೀಡಾಪಟು ವಿನೋದ್ ಕುಮಾರ್ ಅವರು ಸ್ಪರ್ಧೆಗೆ ಅನರ್ಹರಾಗಿದ್ದು, ಆ ಸ್ಪರ್ಧೆಯಲ್ಲಿ ಅವರ ಫಲಿತಾಂಶಗಳು ಅನೂರ್ಜಿತವಾಗಿದೆ ಎಂದು ಹೇಳಿದ್ದಾರೆ.1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಬಿಎಸ್‌ಎಫ್ ನಿವೃತ್ತ ಯೋಧ ಗಾಯಗೊಂಡಿದ್ದರು. ಬಳಿಕ ಪ್ಯಾರಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗುರುತಿಸಿಕೊಂಡಿದ್ದರು. ಈ ಹಿಂದೆ ನಡೆದ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಪೋಲೆಂಡ್‌ನ ಪಿಯೊಟರ್ ಕೊಸೆವಿಚ್ (20.02 ಮೀ) ಮತ್ತು ಕ್ರೊಯೇಷಿಯಾದ ವೆಲಿಮಿರ್ ಸ್ಯಾಂಡರ್ (19.98 ಮೀ) ಬಳಿಕ ವಿನೋದ್ ಕುಮಾರ್ 19.91 ಮೀಟರ್ ದೂರಕ್ಕೆ ಎಸೆದು ದಾಖಲೆ ನಿರ್ಮಿಸಿದ್ದರು. ಅಲ್ಲದೆ ಕಂಚಿನ ಪದಕ ಬಾಚಿಕೊಂಡಿದ್ದರು.ಏನಿದು F52 ವಿಭಾಗ? F52 ಎನ್ನುವುದು ದುರ್ಬಲಗೊಂಡ ಸ್ನಾಯು ಶಕ್ತಿ ಹೊಂದಿರುವ ಕ್ರೀಡಾಪಟುಗಳ ವಿಭಾಗವಾಗಿದ್ದು, ನಿರ್ಬಂಧಿತ ಚಲನೆ, ಅಂಗಗಳ ಕೊರತೆ ಅಥವಾ ಕಾಲಿನ ಉದ್ದ ವ್ಯತ್ಯಾಸ, ಸರ್ವಿಕಲ್ ಕಾರ್ಡ್ ಸಮಸ್ಯೆ ಮತ್ತು ಬೆನ್ನುಹುರಿ ಗಾಯ ( )ದಿಂದಾಗಿ ಸದಾಕಾಲ ಕುಳಿತುಕೊಂಡೇ ಇರುವ ವ್ಯಕ್ತಿಗಳು, ಅಂಗಚ್ಛೇದನ () ಮತ್ತು ಕ್ರಿಯಾತ್ಮಕ ಅಸ್ವಸ್ಥತೆ ( ) ಇರುವ ವ್ಯಕ್ತಿಗಳು F52 ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ. ಆದರೆ ವಿನೋದ್ ಕುಮಾರ್ ಈ ವರ್ಗಕ್ಕೆ ಸೇರುವುದಿಲ್ಲ ಎಂದು ಸಂಘಟಕರು ತೀರ್ಮಾನಿಸಿದ್ದಾರೆ. ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳ ಆಂಗಾಂಗಳ ವೈಫಲ್ಯತೆಯ ಮತ್ತು ಗಂಭೀರತೆಯ ಆಧಾರದ ಮೇಲೆ ಅವರ ವಿವಿಧ ವಿಭಾಗಗಳಿಗೆ ಅವರನ್ನು ನಿಯೋಜಿಸಲಾಗುತ್ತದೆ. ಒಂದೇ ತೆರನಾದ ಆಂಗಿಕ ಸಮಸ್ಯೆ ಇರುವವರನ್ನು ಒಂದು ಗುಂಪು ಮಾಡಲಾಗುತ್ತದೆ. ಇದೇ ರೀತಿ ಕಳೆದ ಆಗಸ್ಟ್ 22ರಂದು ವಿನೋದ್ ಕುಮಾರ್ ರನ್ನು ಕೂಡ F52 ವಿಭಾಗಕ್ಕೆ ಸೇರಿಸಲಾಗಿತ್ತು. ಅಲ್ಲದೆ ಸ್ಪರ್ಧೆಗೆ ಅವಕಾಶ ನೀಡಿದ್ದೇಕೆ ಎಂಬ ವಿಚಾರವಾಗಿ ಸಂಘಟಕರ ವಿರುದ್ಧ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಪ್ಯಾರಲಿಂಪಿಕ್ಸ್: ಭಾರತದ ಯೋಗೇಶ್ ಕತುನಿಯಾ-ದೇವೇಂದ್ರ ಜಝಾರಿಯಾಗೆ ಬೆಳ್ಳಿ, ಸುಂದರ್ ಸಿಂಗ್ ಗುರ್ಜ್ಜಾರ್ ಗೆ ಕಂಚುಟೋಕಿಯೊ ಪ್ಯಾರಲಿಂಪಿಕ್ಸ್: ಮಹಿಳೆಯರ 10 ಮೀ. ಶೂಟಿಂಗ್ ನಲ್ಲಿ ಅವನಿ ಲೆಖಾರಾಗೆ ಚಿನ್ನದ ಪದಕಟೋಕಿಯೊ ಪ್ಯಾರಾಲಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ; ಕಂಚಿನ ಪದಕ ಗೆದ್ದ ವಿನೋದ್ ಕುಮಾರ್!ಟೋಕಿಯೋ ಪ್ಯಾರಾಲಂಪಿಕ್ಸ್: ಪುರುಷರ ಎತ್ತರದ ಜಿಗಿತ ವಿಭಾಗದಲ್ಲಿ ರಜತ ಗೆದ್ದ ನಿಶಾದ್ ಕುಮಾರ್