ನೆಟ್ಟಗೆ ಒಂದು ಮೆಸೇಜ್ ಮಾಡೋಕೂ ಬರಲ್ಲ: ಶೋಯೆಬ್‌ರನ್ನು ಟ್ರೋಲ್ ಮಾಡಿದ ನೆಟಿಗರು! ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ 34ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡು ಕೆಲ ಸಾಲುಗಳನ್ನು ಬರೆದಿದ್ದರು. ಇಸ್ಲಾಮಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ 34ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡು ಕೆಲ ಸಾಲುಗಳನ್ನು ಬರೆದಿದ್ದರು. ಸಾನಿಯಾ ಮಿರ್ಜಾ ತಮ್ಮ ಇನ್ ಸ್ಟಾದಲ್ಲಿ ನಿಮ್ಮೆಲ್ಲರ ಹಾರೈಕೆ ಮತ್ತು ಪ್ರೀತಿಗೆ ಧನ್ಯವಾದಗಳು. ಇಂತಹ ಒಳ್ಳೆಯ ಕುಟುಂಬ ಮತ್ತು ಸ್ನೇಹಿತರನ್ನು ಪಡೆದ ನಾನು ನಿಜಕ್ಕೂ ಧನ್ಯ. ಅಮೇಜಿಂಗ್ ಎಂದು ಬರೆದುಕೊಂಡಿದ್ದರು. ಮುಂದುವರೆದು, ಸರ್ಪ್ಸೈಸ್ ನೀಡಿದ ಪತಿ ಶೋಯೆಬ್ ಮಲಿಕ್ ಗೂ ಧನ್ಯವಾದ ಎಂದು ಬರೆದು ಜೊತೆಗೆ ಪತಿ ಮತ್ತು ಮಗುವಿನ ಜೊತೆಗಿನ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಶೋಯೆಬ್ ಮಲಿಕ್ ಪತ್ನಿ ಬರೆದಿದ್ದ ಸಾಲುಗಳನ್ನೇ ಕಾಪಿ ಪೇಸ್ಟ್ ಮಾಡಿದ್ದು ಇದು ನೆಟಿಗರು ಟ್ರೋಲ್ ಮಾಡುವಂತೆ ಮಾಡಿದೆ. ನೆಟ್ಟಗೆ ಒಂದು ಮೆಸೇಜ್ ಮಾಡೋಕು ಬರುವುದಿಲ್ಲ ಎಂದು ಶೋಯೆಬ್ ರ ಕಾಲೆಳೆಯುತ್ತಿದ್ದಾರೆ.