ಮ್ಯಾಂಚೆಸ್ಟರ್ ಯುನೈಟೆಡ್ ತೊರೆದ ರೊನಾಲ್ಡೊ! ಅಭಿಮಾನಿಗಳಿಗೆ ದೊಡ್ಡ ಶಾಕ್ ವಿಶ್ವ ಶ್ರೇಷ್ಠ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಕ್ಷಣದಿಂದಲೇ ಜಾರಿಯಾಗುವಂತೆ ತಂಡವನ್ನು ತೊರೆಯಲಿದ್ದಾರೆ ಎಂದು ಮ್ಯಾಂಚೆಸ್ಟರ್‌ ಯುನೈಟೆಡ್‌ ಪ್ರೀಮಿಯರ್ ಲೀಗ್ ಮಂಗಳವಾರ ಹೇಳಿದೆ. ಈ ಮೂಲಕ ರೊನಾಲ್ಡೊ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಲಾಗಿದೆ. ಮ್ಯಾಂಚೆಸ್ಟರ್‌: ವಿಶ್ವ ಶ್ರೇಷ್ಠ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಕ್ಷಣದಿಂದಲೇ ಜಾರಿಯಾಗುವಂತೆ ತಂಡವನ್ನು ತೊರೆಯಲಿದ್ದಾರೆ ಎಂದು ಮ್ಯಾಂಚೆಸ್ಟರ್‌ ಯುನೈಟೆಡ್‌ ಪ್ರೀಮಿಯರ್ ಲೀಗ್ ಮಂಗಳವಾರ ಹೇಳಿದೆ. ಈ ಮೂಲಕ ರೊನಾಲ್ಡೊ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಲಾಗಿದೆ. ಕ್ರಿಸ್ಟಿಯಾನೊ ರೊನಾಲ್ಡೊ ತಕ್ಷಣವೇ ಜಾರಿಗೆ ಬರುವಂತೆ ಪರಸ್ಪರ ಒಪ್ಪಂದದ ಮೂಲಕ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯಲಿದ್ದಾರೆ. ಓಲ್ಡ್ ಟ್ರಾಫರ್ಡ್‌ನಲ್ಲಿ ಎರಡು ಸ್ಪೆಲ್‌ಗಳಲ್ಲಿ 346 ಪಂದ್ಯಗಳಲ್ಲಿ 145 ಗೋಲು ಗಳಿಸಿದ ಅವರ ಅಪಾರ ಕೊಡುಗೆಗಾಗಿ ಕ್ಲಬ್ ಅವರಿಗೆ ಧನ್ಯವಾದ ಅರ್ಪಿಸುತ್ತದೆ ಮತ್ತು ಅವರ ಭವಿಷ್ಯಕ್ಕಾಗಿ ಶುಭ ಹಾರೈಸುತ್ತದೆ ಎಂದು ಯುನೈಟೆಡ್ ಹೇಳಿಕೆಯಲ್ಲಿ ತಿಳಿಸಿದೆ. , . .#MUFCಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮೋರ್ಗಾನ್ ಜೊತೆಗಿನ ಅವರ ಇತ್ತೀಚಿನ ಸಂದರ್ಶನದ ಬಗ್ಗೆ ರೊನೊಲ್ಡೊ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಸಂದರ್ಶನದಲ್ಲಿ ರೊನಾಲ್ಡೊ ಹಲವಾರು ವಿಷಯಗಳ ಬಗ್ಗೆ ಕ್ಲಬ್ ನ್ನು ಟೀಕಿಸಿದ್ದರು. ಕೆಲವು ಕ್ಲಬ್ ಗಳ ಮುಖ್ಯಸ್ಥರು ತನ್ನನ್ನು ಹೊರಹಾಕಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು. ಇದೇ ಅವರಿಗೆ ಮುಳುವಾಗಿರಬಹುದೆಂದು ವರದಿಯಾಗಿದೆ. . ’ ( : ' ) ../nkkUbnf4hl