ಒಲಂಪಿಕ್ಸ್: ಭಾರತದ ಟೆನ್ನೀಸ್ ತಾರೆ ಸತ್ಯನ್ ಗೆ 2 ನೇ ಸುತ್ತಿನಲ್ಲಿ ಸೋಲು ಭಾರತದ ಟೆನ್ನಿಸ್ ಆಟಗಾರ ಜಿ ಸತ್ಯನ್ ಟೋಕಿಯೋ ಒಲಂಪಿಕ್ಸ್ ನ 2 ನೇ ಸುತ್ತಿನಲ್ಲಿ ಕೆಳಶ್ರೇಣಿಯ ಸಿಯು ಹ್ಯಾಂಗ್ ಲ್ಯಾಮ್ ವಿರುದ್ಧ ಸೋಲು ಕಂಡಿದ್ದಾರೆ. ಟೋಕಿಯೋ: ಭಾರತದ ಟೆನ್ನಿಸ್ ಆಟಗಾರ ಜಿ ಸತ್ಯನ್ ಟೋಕಿಯೋ ಒಲಂಪಿಕ್ಸ್ ನ 2 ನೇ ಸುತ್ತಿನಲ್ಲಿ ಕೆಳಶ್ರೇಣಿಯ ಸಿಯು ಹ್ಯಾಂಗ್ ಲ್ಯಾಮ್ ವಿರುದ್ಧ ಸೋಲು ಕಂಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಸತ್ಯನ್ 3-1 ಮುನ್ನಡೆ ಸಾಧಿಸಿದ್ದರು. ಆದರೆ ಸತತ ನಾಲ್ಕು ಸುತ್ತಿನಲ್ಲಿ 3-4 ಅಂತರದಿಂದ 95 ನೇ ಶ್ರೇಣಿಯಲ್ಲಿದ್ದ ಹಾಂಕ್ ಕಾಂಗ್ ನ ಆಟಗಾರನ ವಿರುದ್ಧ ಸೋಲು ಕಂಡರು. ಮೊದಲ ಪಂದ್ಯ ತೀವ್ರ ಕಠಿಣವಾಗಿತ್ತು, 5-1 ಅಂತರದಿಂದ ಲ್ಯಾಮ್ ವಿರುದ್ಧ ಮುನ್ನಡೆ ಸಾಧಿಸಿದ್ದರಾದರೂ ಮುಂದಿನ ಎರಡು ಪಂದ್ಯದಲ್ಲಿ ಪಡೆದುಕೊಂಡ ತಿರುವಿನಲ್ಲಿ ಲ್ಯಾಮ್ ಸತ್ಯನ್ ವಿರುದ್ಧ ಮೇಲುಗೈ ಸಾಧಿಸಿದರು. ನಿರ್ಣಾಯಕ ಪಂದ್ಯದಲ್ಲಿ ಲ್ಯಾಮ್ ಸತ್ಯನ್ ವಿರುದ್ದಹ್ 5-2 ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ ಜಯ ದಕ್ಕಿಸಿಕೊಂಡರು.