ಕೋಬ್ ಚಾಲೆಂಜರ್ ಟೆನಿಸ್: ರಾಮಕುಮಾರ್-ಪುರವ್ ರಾಣಾ ಚಾಂಪಿಯನ್ ಜಪಾನ್‌ನಲ್ಲಿ ನಡೆದ ಕೋಬ್ ಚಾಲೆಂಜರ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಮತ್ತು ಪುರವ್ ರಾಣಾ ಡಬಲ್ಸ್ ಪ್ರಶಸ್ತಿಯನ್ನು ಗೆದ್ದು ಕೊಂಡಿದ್ದಾರೆ. ನವದೆಹಲಿ: ಜಪಾನ್‌ನಲ್ಲಿ ನಡೆದ ಕೋಬ್ ಚಾಲೆಂಜರ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಮತ್ತು ಪುರವ್ ರಾಣಾ ಡಬಲ್ಸ್ ಪ್ರಶಸ್ತಿಯನ್ನು ಗೆದ್ದು ಕೊಂಡಿದ್ದಾರೆ.ನಾಲ್ಕನೇ ಶ್ರೇಯಾಂಕಿತ ಆಟಗಾರರಾದ ರಾಮನಾಥನ್ ಮತ್ತು ರಾಣಾ ಎರಡನೇ ಶ್ರೇಯಾಂಕದ ಸ್ವಿಟ್ಜರ್ಲೆಂಡ್‌ನ ಆಂಡ್ರೆ ಗೊರನ್ಸನ್ ಮತ್ತು ಇಂಡೋನೇಷ್ಯಾದ ಕ್ರಿಸ್ಟೋಫರ್ ರುಂಗ್‌ಕಾಟ್ ಅವರನ್ನು 7-6 (6), 6-3 ಸೆಟ್‌ಗಳಿಂದ ಸೋಲಿಸಿದರು.