ಮಲೇಷ್ಯಾ ಮಾಸ್ಟರ್ಸ್ ಫೈನಲ್‌: ಚೀನಾ ಆಟಗಾರ್ತಿ ವಾಂಗ್ ಝಿಯಿ ವಿರುದ್ಧ ಸೋತ ಪಿ.ವಿ. ಸಿಂಧು ಭಾನುವಾರ ನಡೆದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ ನಲ್ಲಿ ಭಾರತದ ಆಟಗಾರ್ತಿ ಪಿ. ವಿ. ಸಿಂಧು ಅವರು ಚೀನಾದ ವಾಂಗ್ ಝಿಯಿ ವಿರುದ್ಧ 21-16, 5-21 ಮತ್ತು 21-16 ಸೆಟ್ ಗಳಿಂದ ಸೋತು ನಿರ್ಗಮಿಸಿದರು. ಕ್ವಾಲಾಲಂಪುರ: ಭಾನುವಾರ ನಡೆದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ ನಲ್ಲಿ ಭಾರತದ ಆಟಗಾರ್ತಿ ಪಿ. ವಿ. ಸಿಂಧು ಅವರು ಚೀನಾದ ವಾಂಗ್ ಝಿಯಿ ವಿರುದ್ಧ 21-16, 5-21 ಮತ್ತು 21-16 ಸೆಟ್ ಗಳಿಂದ ಸೋತು ನಿರ್ಗಮಿಸಿದರು. ಈ ಮೂಲಕ 2022 ಸಿಂಗಾಪುರ ಓಪನ್ ನಂತರ ತಮ್ಮ ಮೊದಲ ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿ ವಿಫಲರಾದರು.ಇದು ಏಪ್ರಿಲ್ 2023ರಲ್ಲಿ ನಡೆದ ಮ್ಯಾಡ್ರಿಡ್ ಮಾಸ್ಟರ್ಸ್ ನಂತರ ಫೈನಲ್‌ನಲ್ಲಿ ಸಿಂಧು ಅವರ ಮೊದಲ ಪ್ರದರ್ಶನವಾಗಿತ್ತು. ಈ ಫೆಬ್ರವರಿಯಲ್ಲಿ ಗಾಯದಿಂದ ಮರಳಿದ ನಂತರ ಆಡಿದ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.ಮೊದಲ ಸೆಟ್ ನಲ್ಲಿ 21-16 ರ ಮೂಲಕ ಗೆಲುವು ಸಾಧಿಸಿದ ನಂತರ ಉತ್ತಮ ಆರಂಭ ಮಾಡಿದ್ದರು. ಎರಡನೇ ಸೆಟ್ ನಲ್ಲಿ ಚೀನಾದ ಆಟಗಾರ್ತಿ ಕಮ್ ಬ್ಯಾಕ್ ಮಾಡಿದರು. ಬಳಿಕ ಮೂರನೇ ಸೆಟ್ ನಲ್ಲೂ ಸಿಂಧುಗೆ ಅವಕಾಶ ನೀಡದೆ 21-16 ಸೆಟ್ ಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.