ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್‌: ದ್ವಿತೀಯ ಸ್ಥಾನ ಪಡೆದ ಅಭಿನವ್ ಬಳ್ಳಾರಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಎರಡನೇ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಧಾರವಾಡದ ಅಭಿನವ್ ಬಳ್ಳಾರಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿಜಯಪುರ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಎರಡನೇ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಧಾರವಾಡದ ಅಭಿನವ್ ಬಳ್ಳಾರಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.ಇದನ್ನು ಓದಿ : ಕಾಮನ್ ವೆಲ್ತ್ ಗೇಮ್ಸ್ 2022: ಭಾರತದ ಕುಸ್ತಿಪಟುಗಳಾದ ನವೀನ್, ವಿನೇಶ್ ಫೋಗಟ್ ಗೆ ಚಿನ್ನ, ಪೂಜಾಗೆ ಕಂಚಿನ ಪದಕ ಟ್ರೆಡಿಷನಲ್ ಶೋಟೋಕನ್ ಕರಾಟೆ ಅಕಾಡೆಮಿ ಆಗಸ್ಟ್ 6 ಮತ್ತು 7 ರಂದು ಎರಡನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್‌ ಆಯೋಜಿಸಿದ್ದು, ಅಭಿನವ್ ಬಳ್ಳಾರಿ ಶನಿವಾರ ನಡೆದ ಟ್ರೆಡಿಷನಲ್ ಕರಾಟೆ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.ಇದನ್ನು ಓದಿ: ಕರಾಟೆ ಸೇರಿ ನಾಲ್ಕು ಕ್ರೀಡೆಗಳು ಟೋಕಿಯೊ ಒಲಿಂಪಿಕ್ಸ್‌ಗೆ ಹೊಸದಾಗಿ ಸೇರ್ಪಡೆಅಭಿನವ್ ಬಳ್ಳಾರಿ ಧಾರವಾಡದ ಜೆಎಸ್ಎಸ್ ಶಾಲೆಯ ನಾಲ್ಕನೆ ತರಗತಿ ವಿದ್ಯಾರ್ಥಿಯಾಗಿದ್ದು, 9 ವರ್ಷದ ವೈಟ್ ಬೆಲ್ಟ್ ವಿಭಾಗದಲ್ಲಿ ಎರಡನೇ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಅಭಿನವ್ ಬಳ್ಳಾರಿ ತಂದೆ ಚಂದ್ರಶೇಖರ್ ಬಳ್ಳಾರಿ ವೃತ್ತಿಯಲ್ಲಿ ಪೊಲೀಸ್ ಪೇದೆಯಾಗಿದ್ದು, ಹಲವು ವರ್ಷಗಳಿಂದ ಧಾರವಾಡದಲ್ಲಿ ನೆಲೆಸಿದ್ದಾರೆ.