2022: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಫಿಫಾ ವಿಶ್ವಕಪ್, ಟಿವಿ ಪ್ರೇಕ್ಷಕರ ಹಿಂದಿಕ್ಕಿ ಡಿಜಿಟಲ್ ದಾಖಲೆ ಕತಾರ್ ವಿಶ್ವಕಪ್‌ ವೀಕ್ಷಣೆಯಲ್ಲಿ ಭಾರತ ಹೊಸ ಸಾಧನೆ ಮಾಡಿದ್ದು, ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲಿ, ಕತಾರ್‌ನಲ್ಲಿ ನಡೆದ ವಿಶ್ವಕಪ್ ಅನ್ನು ಭಾರತದಲ್ಲಿ () ಅತಿ ಹೆಚ್ಚು ವೀಕ್ಷಿಸಲಾಗಿದೆ. ದೋಹಾ: ಕತಾರ್ ವಿಶ್ವಕಪ್‌ ವೀಕ್ಷಣೆಯಲ್ಲಿ ಭಾರತ ಹೊಸ ಸಾಧನೆ ಮಾಡಿದ್ದು, ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲಿ, ಕತಾರ್‌ನಲ್ಲಿ ನಡೆದ ವಿಶ್ವಕಪ್ ಅನ್ನು ಭಾರತದಲ್ಲಿ () ಅತಿ ಹೆಚ್ಚು ವೀಕ್ಷಿಸಲಾಗಿದೆ. ಪ್ರಮುಖವಾಗಿ, ಡಿಜಿಟಲ್ () ವೀಕ್ಷಕರು ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್‌ಗಾಗಿ ಟಿವಿ ಪ್ರೇಕ್ಷಕರನ್ನು ಹಿಂದಿಕ್ಕಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ. ಕತಾರ್ ಫಿಫಾ ವಿಶ್ವಕಪ್ 2022 ಅನ್ನು ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡುತ್ತಿರುವ ಜಿಯೋ ಸಿನಿಮಾ ಮೂಲಕ ಭಾರತದಿಂದ 10 ಕೋಟಿಗೂ ಹೆಚ್ಚು ಜನರು ಪಂದ್ಯಗಳನ್ನು ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ. ನವೆಂಬರ್ 20 ರಿಂದ ಮೂರು ವಾರಗಳವರೆಗೆ ಮತ್ತು ಮೊಬೈಲ್ಗಳಲ್ಲಿ ಅತೀ ಹೆಚ್ಚು ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.ಇದನ್ನೂ ಓದಿ: ವಿಶ್ವಕಪ್ ಚಾಂಪಿಯನ್ ತಂಡದ ಪರವಾಗಿ, ದೇಶಕ್ಕಾಗಿ ಇನ್ನೂ ಒಂದಷ್ಟು ಕಾಲ ಆಡಲು ಬಯಸುತ್ತೇನೆ: ಲಯೊನಲ್‌ ಮೆಸ್ಸಿಜಿಯೋ ಸಿನಿಮಾ ವೀಕ್ಷಕರಿಗೆ ವಿಶ್ವಕಪ್ ಅಉಭವನ್ನು ವಿಶೇಷವಾಗಿ ನೀಡಿದೆ. ಫುಟ್‌ಬಾಲ್ ಅಭಿಮಾನಿಗಳು ವರ್ಲ್ಡ್ ಕಪ್ನ್ನು ಜಿಯೋ ಸಿನಿಮಾ ಅಫ್ಲಿಕೇಶನ್ನಲ್ಲಿ ಆಡಿಯೋ-ದೃಶ್ಯದ ಜೊತೆಗೆ ಅದ್ಭುತವಾಗಿ ಆನಂದಿಸಿದ್ದಾರೆ. ಇದರಿಂದಾಗಿ ಈ ಬಾರಿ ಭಾರತದಲ್ಲಿ ಫಿಫಾ ವಿಶ್ವಕಪ್ನ್ನು ಟಿವಿ ಗಳಲ್ಲಿ ನೋಡಿರುವುದಕ್ಕಿಂತ ಹೆಚ್ಚಾಗಿ ಜಿಯೋ ಸಿನಿಮಾ ಆಫ್ ಗಳ ಮೂಲಕ ವೀಕ್ಷಿಸಿದ್ದಾರೆ. ಹೀಗಾಗಿ ಇದೇ ಮೊದಲ ಬಾರಿಗೆ ಡಿಜಿಟಲ್ ಮಾಧ್ಯಮವು ಟಿವಿ ಯನ್ನು ವೀಕ್ಷಣೆಯಲ್ಲಿ ಹಿಂದಿಕ್ಕಿದೆ.42 ಮಿಲಿಯನ್ ವೀಕ್ಷಣೆ: ನವೆಂಬರ್ 20ರಂದು ಪ್ರಾರಂಭವಾದ ವಿಶ್ವಕಪ್ಗೆ ವಿಶ್ವದಾದ್ಯಂತೆ ಉತ್ತಮ ರೆಸ್ಪಾನ್ಸ್ ದೊರಕಿದೆ. ಅಲ್ಲದೇ ಒಂದು ವರದಿಯ ಪ್ರಕಾರ, ಈವರೆಗೆ ಒಟ್ಟು ಎಲ್ಲಾ ಪಂದ್ಯಗಳ ವೀಕ್ಷಣೆಯು 42.2 ಮಿಲಿಯನ್ ತಲುಪಿದೆ ಎಂದು ಹೇಳಲಾಗಿದೆ. ಅಂದರೆ ಇದು ಸರಾಸರಿ ಪಂದ್ಯದ ವ್ಯಾಪ್ತಿ 5.9 ಮಿಲಿಯನ್ ಆಗಿದೆ. ಅದರಲ್ಲಿಯೂ ಭಾರತದಲ್ಲಿ ಕೇರಳ (13.1 ಮಿಲಿಯನ್), ಪಶ್ಚಿಮ ಬಂಗಾಳ (8.69 ಮಿಲಿಯನ್), ಅಸ್ಸಾಂ/ಈಶಾನ್ಯ/ಸಿಕ್ಕಿಂ (7.1 ಮಿಲಿಯನ್), ತಮಿಳುನಾಡು/ಪುದುಚೇರಿ (2.7 ಮಿಲಿಯನ್), ಮತ್ತು ಮಹಾರಾಷ್ಟ್ರ/ಗೋವಾ (2.3) ಮಿಲಿಯನ್) ವೀಕ್ಷಣೆ ಆಗಿದೆ.ಇದನ್ನೂ ಓದಿ: ಅರ್ಜೆಂಟೀನಾ ಗೆಲುವಿನಿಂದ ಲಕ್ಷಾಂತರ ಭಾರತೀಯ ಅಭಿಮಾನಿಗಳಿಗೆ ಖುಷಿ: ಪ್ರಧಾನಿ ಮೋದಿಬ್ರೆಜಿಲ್ ಸ್ವಿಟ್ಜರ್ಲೆಂಡ್ ಪಂದ್ಯವು 13 ಮಿಲಿಯನ್ ವೀಕ್ಷಕರನ್ನು ಹೊಂದಿರುವ ಪಂದ್ಯಾವಳಿಯಲ್ಲಿ ಹೆಚ್ಚು ತಲುಪಿದ ಪಂದ್ಯವಾಗಿದೆ. ಅಧಿಕೃತ ಪ್ರಸಾರ ಹಕ್ಕು ಹೊಂದಿರುವ Viacom18, Sports18 ಮತ್ತು 18 ಯಲ್ಲಿ ಪಂದ್ಯಗಳನ್ನು ಪ್ರಸಾರ ಮಾಡುತ್ತಿದೆ. ಆದರೆ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲಾಗುತ್ತಿದ್ದು, ಇದು ಈ ಬಾರಿ ಅತೀ ಹೆಚ್ಚು ಡೌನ್ಲೋಡ್ ಆದ ಆಯಪ್ ಆಗಿದೆ.ಇತಿಹಾಸದ ನಿರ್ಮಿಸಿದ ಫಿಫಾ: ಕತಾರ್ 2022 ಈ ವಿಶ್ವಕಪ್ ಭಾರತದಲ್ಲಿ ಅತಿಹೆಚ್ಚು ವೀಕ್ಷಿಸಲಾದ ವಿಶ್ವಕಪ್‌ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮತ್ತೊಂದು ವಿಶೇಷ ಎಂದರೆ ಮೊದಲ ಬಾರಿಗೆ ಟಿವಿಯನ್ನು ಡಿಜಿಟಲ್ ವೀಕ್ಷಕರು ಹಿಂದಿಕ್ಕಿದ್ದಾರೆ. ವರ್ಲ್ಡ್ ಕಪ್ ಕತಾರ್ 2022 ರ ವ್ಯಾಪ್ತಿಯು ನಲ್ಲಿ 100mn ದಾಟುವ ನಿರೀಕ್ಷೆಯಿದೆ. ನವೆಂಬರ್ 20 ರಿಂದ ಮತ್ತು ಎರಡರಲ್ಲೂ ಮೂರು ವಾರಗಳವರೆಗೆ ಡೌನ್‌ಲೋಡ್ ಮಾಡಲಾದ ನಂ. 1 ಉಚಿತ ಅಪ್ಲಿಕೇಶನ್ ಆಗಿ ಹೊರಹೊಮ್ಮಿದೆ.ಇದನ್ನೂ ಓದಿ: 36 ವರ್ಷಗಳ ಬಳಿಕ 3ನೇ ಬಾರಿ ಫಿಫಾ ವಿಶ್ವಕಪ್ ಗೆದ್ದ ಅರ್ಜೆಂಟೀನಾ, ಮೆಸ್ಸಿಗೆ ಗೆಲುವಿನ ವಿದಾಯJioCinema ಹಿಂದೆಂದೂ ಜನ ಕಂಡಿರದ ಹೈಪ್ ಮೋಡ್‌ನೊಂದಿಗೆ ವೀಕ್ಷಕರ ಲೈವ್ ಅನುಭವವನ್ನು ಹೆಚ್ಚಿಸಿದೆ. ಹಾಗೆಯೇ, . ಜೊತೆಗಿನ ಪಾಲುದಾರಿಕೆ ಬಳಕೆದಾರರಿಗೆ ಹಿಂದೆಂದೂ ನೋಡಿರದ ಲೆನ್ಸ್ ಅನ್ನು ಸಹ ನೀಡುತ್ತಿದ್ದು, ಜನರಿಗೆ ಫುಟ್ಬಾಲ್ ಆಟದ ಸುಂದರ ಅನುಭವ ನೀಡುತ್ತಿದೆ. ಭಾರತದಲ್ಲಿ ಫುಟ್‌ಬಾಲ್‌ನ ಹೀರೋಗಳನ್ನು ನೆನಪಿಸಿಕೊಳ್ಳುವ ಸೀರೀಸ್ ಅನ್ನು ಸಹ ಮಹೀಂದ್ರಾದೊಂದಿಗೆ ಸೇರಿ ವಯೋಕಾಂ ನಿರ್ಮಿಸಿದೆ.ಮೊದಲ ಬಾರಿಗೆ ಸ್ಥಳಿಯ ಭಾಷೆಯಲ್ಲಿ ಫಿಫಾ ಕಮೆಂಟರಿ: ವೇಯ್ನ್ ರೂನಿ, ಲೂಯಿಸ್ ಫಿಗೊ, ರಾಬರ್ಟ್ ಪೈರ್ಸ್, ಗಿಲ್ಬರ್ಟೊ ಸಿಲ್ವಾ ಮತ್ತು ಸಾಲ್ ಕ್ಯಾಂಪ್‌ಬೆಲ್ ಸೇರಿದಂತೆ ವಿಶ್ವಕಪ್ ತಾರೆಗಳು ಜಿಯೋ ಸಿನಿಮಾದ ವಿಶ್ವ ದರ್ಜೆಯ ಸ್ಟುಡಿಯೋಗಳಲ್ಲಿ ಲೈವ್ ಕಾಮೆಂಟರಿ ಮತ್ತು ಪಂದ್ಯದ ವಿಶ್ಲೇಷಣೆ ನೀಡಿದ್ದಾರೆ. ಕೇರಳದ ಸಂತೋಷ್ ಟ್ರೋಫಿ ತಾರೆಯರಾದ ಜೋಪಾಲ್ ಅಂಚೇರಿ, ಮೊಹಮ್ಮದ್ ರಫಿ, ಸುಶಾಂತ್ ಮ್ಯಾಥ್ಯೂ ಮತ್ತು ಫಿರೋಜ್ ಮೊಹಮ್ಮದ್ ಅವರಲ್ಲದೆ, ಖ್ಯಾತ ಕಾಮೆಂಟೇಟರ್‌ಗಳಾದ ಅನು ಜೋಸೆಫ್ ಮತ್ತು ಎಲ್ಡೋಪೋಲ್ ಪುದುಶೇರಿ ಕೂಡ ಮಲಯಾಳಂನಲ್ಲಿ ವಿಶ್ವಕಪ್ ವಿಶೇಷತೆಯನ್ನು ವೀಕ್ಷಕರಿಗೆ ನೀಡಿದ್ದಾರೆ. ಮಲಯಾಳಂ ಮತ್ತು ಇಂಗ್ಲಿಷ್ ಜೊತೆಗೆ, ಹಿಂದಿ ಮತ್ತು ಬಂಗಾಳಿ ಪಂದ್ಯಗಳು ಜಿಯೋ ಸಿನಿಮಾದಲ್ಲಿ ಲೈವ್ ಆಗಿ ಲಭ್ಯವಿವೆ.