ಮಹಿಳೆಯರ ಏರ್ ರೈಫಲ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಸ್ವರ್ಣಕ್ಕೆ ಕೊರಳೊಡ್ಡಿದ ಎಲವೆನಿಲ್ ವಲರಿವನ್ ಅಂತಾರಾಷ್ಟ್ರೀಯ ಏರ್ ರೈಫಲ್ ವಿಶ್ವಕಪ್ ಫೈನಲ್ ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣಪದಕ ಲಭಿಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ನಲ್ಲಿ ಎಲವೆನಿಲ್ ವಲರಿವನ 250.8 ಪಾಯಿಂಟ್ ಗಳೊಂದಿಗೆ ತೈವಾನ್ ನ ಲಿನ್ ಯಿಂಗ್ -ಶಿನ್ (250.7) ಅವರನ್ನು ಸೋಲಿಸಿದ್ದಾರೆ. ಪುಟಿಯಾನ(ಚೀನಾ): ಅಂತಾರಾಷ್ಟ್ರೀಯ ಏರ್ ರೈಫಲ್ ವಿಶ್ವಕಪ್ ಫೈನಲ್ ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣಪದಕ ಲಭಿಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ನಲ್ಲಿ ಎಲವೆನಿಲ್ ವಲರಿವನ 250.8 ಪಾಯಿಂಟ್ ಗಳೊಂದಿಗೆ ತೈವಾನ್ ನ ಲಿನ್ ಯಿಂಗ್ -ಶಿನ್ (250.7) ಅವರನ್ನು ಸೋಲಿಸಿದ್ದಾರೆ. ರೊಮಾನಿಯಾದ ಲೌರಾ-ಜಾರ್ಜೆಟಾ ಕೊಮನ್ 229 ಪಾಯಿಂಟ್ ಗಳೊಂದಿಗೆ ಮೂರನೇ ಸ್ಥಾನ ಗಳಿಸಿದ್ದಾರೆ. ಇದೇ ವಿಭಾಗದಲ್ಲಿ ಭಾರತದ ಮೆಹುಲಿ ಘೋಷ್ ಅಂತಿಮ ಸುತ್ತು ಪ್ರವೇಶಿಸಿದ್ದರು. ಆದರೆ ಕೊನೆಯಲ್ಲಿ 163.8 ಪಾಯಿಂಟ್ ಗಳೊಂದಿಗೆ 6ನೆಯವರಾಗಿ ಹೊರಹೊಮ್ಮಿದರು.ಪುರುಷರ 10 ಮೀಟರ್ ಏರ್ ಪಿಸ್ತೂಲ್ ಪಂದ್ಯದಲ್ಲಿ ಅಭಿಷೇಕ್ ವರ್ಮ ಮತ್ತು ಸೌರಭ್ ಚೌಧರಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.