ಏಷ್ಯನ್ ಕುಸ್ತಿ: ರವಿ ದಹಿಯಾಗೆ ಚಿನ್ನ, ಬಜರಂಗ್ ಪುನಿಯಾಗೆ ಗಾಯ, ಫೈನಲ್ ನಿಂದ ಹೊರಕ್ಕೆ ಕಝಕಿಸ್ಥಾನದ ಅಲ್ಮಾಟಿಯಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 65 ಕೆಜಿ ಫೈನಲ್‌ನಲ್ಲಿ ಜಪಾನ್‌ನ ನೆಮೆಸಿಸ್ ಟಕುಟೊ ಒಟೊಗುರೊ ವಿರುದ್ಧ ಬಜರಂಗ್ ಪುನಿಯಾ ಗಾಯದ ಸಮಸ್ಯೆಯಿಂದಾಗಿ ಹೊರಬಂದರೆ ಇನ್ನೊಬ್ಬ ಕುಸ್ತಿಪಟು ರವಿ ದಹಿಯಾ 57 ಕೆಜಿ ಫೈನಲ್ ನಲ್ಲಿ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ. ಚೆನ್ನೈ: ಕಝಕಿಸ್ಥಾನದ ಅಲ್ಮಾಟಿಯಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 65 ಕೆಜಿ ಫೈನಲ್‌ನಲ್ಲಿ ಜಪಾನ್‌ನ ನೆಮೆಸಿಸ್ ಟಕುಟೊ ಒಟೊಗುರೊ ವಿರುದ್ಧ ಬಜರಂಗ್ ಪುನಿಯಾ ಗಾಯದ ಸಮಸ್ಯೆಯಿಂದಾಗಿ ಹೊರಬಂದರೆ ಇನ್ನೊಬ್ಬ ಕುಸ್ತಿಪಟು ರವಿ ದಹಿಯಾ 57 ಕೆಜಿ ಫೈನಲ್ ನಲ್ಲಿ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ.ಫೈನಲ್‌ನಲ್ಲಿ ಇರಾನ್‌ನ ಅಲಿರೆಜಾ ನೊಸ್ರೊಟೊಲ್ಲಾ ಸರ್ಲಾಕ್ ವಿರುದ್ಧ ಸೆಣೆಸಿ ರವಿ ಚಿನ್ನದ ಪದಕ ಗಳಿಸಿಕೊಂಡರು. ಅವರು , 9-4 ಅಂತರದಲ್ಲಿ ಗೆಲುವು ಸಾಧಿಸಿದ್ದರು.ಇದಲ್ಲದೆ ಒಲಿಂಪಿಕ್ ಅಲ್ಲದ 79 ಕೆಜಿ ವಿಭಾಗದಲ್ಲಿ ನರಸಿಂಗ್ ಯಾದವ್ ಅವರು ಇರಾಕ್‌ನ ಅಹ್ಮದ್ ಮೊಹ್ಸಿನ್ ಕದಿಮ್ ಅವರನ್ನು 8-2ರಿಂದ ಹಿಂದಿಕ್ಕಿ ಕಂಚು ಗೆದ್ದರೆ . 70 ಕೆಜಿ ವಿಭಾಗದಲ್ಲಿ ಕರಣ್, ಸತ್ಯವರ್ತ್ ಕಾದಿಯಾನ್ (97 ಕೆಜಿ) ತಲಾ ಒಂದೊಂದು ಕಂಚಿನ ಪದಕವನ್ನು ದೇಶಕ್ಕೆ ಕೊಡುಗೆ ನೀಡೀದ್ದಾರೆ.