ಕನ್ನಡ ಮಾತನಾಡಿ ಕನ್ನಡಿಗರ ಮನಗೆದ್ದ F1 ಸೂಪರ್ ಸ್ಟಾರ್ ಲೂಯಿಸ್ ಹ್ಯಾಮಿಲ್ಟನ್ ಫಾರ್ಮುಲಾ 1 ಸೂಪರ್ ಸ್ಟಾರ್ ಲೂಯಿಸ್ ಹ್ಯಾಮಿಲ್ಟನ್ ಕನ್ನಡ ಮಾತನಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಲಂಡನ್: ಫಾರ್ಮುಲಾ 1 ಸೂಪರ್ ಸ್ಟಾರ್ ಲೂಯಿಸ್ ಹ್ಯಾಮಿಲ್ಟನ್ ಕನ್ನಡ ಮಾತನಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.ಹೌದು.. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ F1 ಸೂಪರ್ ಸ್ಟಾರ್ ಲೂಯಿಸ್ ಹ್ಯಾಮಿಲ್ಟನ್ ಕನ್ನಡ ಪದ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಹ್ಯಾಮಿಲ್ಟನ್‌ ಬಾಯಲ್ಲಿ ಕನ್ನಡ ಪದವನ್ನು ಉಚ್ಚರಿಸುವ ಪ್ರಯತ್ನದಲ್ಲಿ ಯುವತಿಯೊಬ್ಬರು ಯಶಸ್ವಿಯಾಗಿದ್ದು, ಹ್ಯಾಮಿಲ್ಟನ್ ‘ಒಳ್ಳೆಯದಾಗಲಿ’ ಎಂದು ಕನ್ನಡದಲ್ಲಿ ಹಾರೈಸಿರುವ ವಿಡಿಯೊ ಇದೀಗ ಎಲ್ಲೆಡೆ ವೈರಲ್( ) ಆಗುತ್ತಿದೆ. 😭😭😭😭, . !!!! ../N2BzjhkA5mಯುವತಿಯೊಬ್ಬರು ಗುಡ್ ಲಕ್ ಎಂಬ ಪದವನ್ನು 44 ವಿವಿಧ ಭಾಷೆಗಳಲ್ಲಿ ಬರೆದಿರುವ ಕಾರ್ಡ್ವೊಂದನ್ನು ಹ್ಯಾಮಿಲ್ಟನ್ಗೆ ತೊರಿಸಿದ್ದಾರೆ. ಇದರಲ್ಲಿ ಕನ್ನಡದಲ್ಲೂ ‘ಒಳ್ಳೆಯದಾಗಲಿ’ ಎಂಬ ಪದವನ್ನು ಬರೆಯಲಾಗಿದ್ದು. ಇದನ್ನು ಓದಲು ಸಾಧ್ಯವಾಗದ ಹ್ಯಾಮಿಲ್ಟನ್ಗೆ ಈ ಯುವತಿ ಹೇಗೆ ಉಚ್ಚರಿಸಬೇಕು ಎಂದು ಹೇಳಿಕೊಟ್ಟಿದ್ದಾಳೆ.ಆರಂಭದಲ್ಲಿ ತಡವರಿಸಿದ ಹ್ಯಾಮಿಲ್ಟನ್‌ ಅಂತಿಮವಾಗಿ ‘ಒಳ್ಳೆಯದಾಗಲಿ’ ಎಂದು ಹೇಳುವಲ್ಲಿ ಯಶಸ್ಸು ಕಂಡಿದ್ದಾರೆ. ಕೆಲ ಕನ್ನಡಿಗರು ಈ ವಿಡಿಯೊಗೆ ‘ನಮ್ಮ ಹುಡುಗ’ ಎಂದು ಕಮೆಂಟ್ ಮಾಡಿದ್ದಾರೆ. (@)