ಪಂದ್ಯ ಲೈವ್ ನಡೆಯುತ್ತಿರುವಾಗಲೇ ಬಟ್ಟೆ ಬಿಚ್ಚಿದ ಮಾಡೆಲ್‌ಗಳು, ಅವಾಕ್ಕಾಗಿ ನಿಂತ ಆಟಗಾರರು, ವಿಡಿಯೋ ವೈರಲ್! ಪಂದ್ಯ ಲೈವ್ ನಡೆಯುತ್ತಿರುವಾಗಲೇ ಇಬ್ಬರು ಮಾಡೆಲ್‌ಗಳು ಬಟ್ಟೆ ಬಿಚ್ಚಿದ್ದು ಇದನ್ನು ನೋಡಿದ ಆಟಗಾರರು ಅವಾಕ್ಕಾಗಿ ನಿಂತಿದ್ದು ಪಂದ್ಯ ಕೆಲ ಕಾಲ ನಿಂತಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ವಾಷಿಂಗ್ಟನ್: ಪಂದ್ಯ ಲೈವ್ ನಡೆಯುತ್ತಿರುವಾಗಲೇ ಇಬ್ಬರು ಮಾಡೆಲ್‌ಗಳು ಬಟ್ಟೆ ಬಿಚ್ಚಿದ್ದು ಇದನ್ನು ನೋಡಿದ ಆಟಗಾರರು ಅವಾಕ್ಕಾಗಿ ನಿಂತಿದ್ದು ಪಂದ್ಯ ಕೆಲ ಕಾಲ ನಿಂತಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಅಮೆರಿಕದಲ್ಲಿ ಬೇಸ್ ಬಾಲ್ ವಿಶ್ವ ಸರಣಿಯ ಟೂರ್ನಮೆಂಟ್ ಒಂದರಲ್ಲಿ ಮಾಡೆಲ್‌ಗಳಾದ ಜುಲಿಯಾ ರೋಸ್ ಹಾಗೂ ಲಾರೆನ್ ಸಮ್ಮರ್ ತಮ್ಮ ಮೇಲಿನ ಟೀ ಶರ್ಟ್ ಬಿಚ್ಚಿ ಡ್ಯಾನ್ಸ್ ಮಾಡಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇನ್ನು ಮಾಡೆಲ್ ಗಳ ಅಸಭ್ಯ ವರ್ತನೆಯನ್ನು ಕಂಡ ಆಟಗಾರರು ಆಟದ ಗಮನ ಕೊಡಲಾಗಲಿಲ್ಲ. ಇದರಿಂದ ಕೆಲ ಕಾಲ ಪಂದ್ಯ ನಿಲ್ಲಿಸಲಾಗಿತ್ತು. ನಂತರ ಭದ್ರತಾ ಸಿಬ್ಬಂದಿಗಳು ಮಾಡೆಲ್ ಗಳನ್ನು ಕ್ರೀಡಾಂಗಣದಿಂದ ಹೊರಗೆ ಕಳುಹಿಸಿದರು. ಈ ವೇಳೆ ನಾವು 55 ಲಕ್ಷ ರುಪಾಯಿ ಕೊಟ್ಟು ಪಂದ್ಯ ವೀಕ್ಷಣೆ ಬಂದಿದ್ದಾಗಿ ಕಿರುಚಾಡಿದರು. ಮಾಡೆಲ್ ಗಳ ಅಸಭ್ಯ ವರ್ತನೆಯಿಂದ ಬೇಸ್ ಬಾಲ್ ಟೂರ್ನಿಯಿಂದ ಅವರಿಗೆ ನಿಷೇಧ ಹೇರಲಾಗಿದೆ.