2020 ಒಲಿಂಪಿಕ್ಸ್ ರದ್ದತಿಗಾಗಿ ಟೋಕಿಯೊ ಗವರ್ನರ್ ಗೆ ಅರ್ಜಿ! ಟೋಕಿಯೊ ಒಲಿಂಪಿಕ್ಸ್ 2020 ರದ್ದತಿಗೆ ಸಂಬಂಧಿಸಿದಂತೆ ಮೂರು ಲಕ್ಷ 51 ಸಾವಿರ ಜನರ ಸಹಿಯುಳ್ಳ ಆನ್ ಲೈನ್ ಅರ್ಜಿಯನ್ನು ಟೋಕಿಯೊ ಗವರ್ನರ್ ಯೂರಿಕೊ ಕೊಯಿಕೆ ಅವರಿಗೆ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಗಳ ಮುಖ್ಯಸ್ಥರಿಗೂ ಕಳುಹಿಸಲಾಗಿದೆ. ನವದೆಹಲಿ: ಟೋಕಿಯೊ ಒಲಿಂಪಿಕ್ಸ್ 2020 ರದ್ದತಿಗೆ ಸಂಬಂಧಿಸಿದಂತೆ ಮೂರು ಲಕ್ಷ 51 ಸಾವಿರ ಜನರ ಸಹಿಯುಳ್ಳ ಆನ್ ಲೈನ್ ಅರ್ಜಿಯನ್ನು ಟೋಕಿಯೊ ಗವರ್ನರ್ ಯೂರಿಕೊ ಕೊಯಿಕೆ ಅವರಿಗೆ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಗಳ ಮುಖ್ಯಸ್ಥರಿಗೂ ಕಳುಹಿಸಲಾಗಿದೆ.ಟೋಕಿಯೊ ಒಲಿಂಪಿಕ್ ಕ್ರೀಡಾಕೂಟವನ್ನು ರದ್ದುಗೊಳಿಸಬೇಕೆಂಬ ಜನರು ಕೊರೋನಾ ಸಾಂಕ್ರಾಮಿಕ ಯುಗದಲ್ಲಿ ಕ್ರೀಡಾ ಕೂಟವನ್ನು ಆಯೋಜಿಸುವ ಬದಲು ಜೀವ ಉಳಿಸಲು ಆದ್ಯತೆ ನೀಡುವಂತೆ ಒಲಿಂಪಿಕ್ ಸಮಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ರಾಜ್ಯಪಾಲ ಯೂರಿಕೊ ಕೊಯಿಕೆ ಅವರು ಒಲಿಂಪಿಕ್ ಕ್ರೀಡಾಕೂಟದ ವಿರುದ್ಧ ನಡೆಯುತ್ತಿರುವ ಅಭಿಯಾನದ ಬಗ್ಗೆ, ಅವರು ಸುರಕ್ಷಿತ ಒಲಿಂಪಿಕ್ಸ್ ಆಯೋಜನೆಯತ್ತ ಕೆಲಸ ಮಾಡುವುದಾಗಿ ಹೇಳಿದರು.ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದರೂ, ಕ್ರೀಡಾಕೂಟಕ್ಕೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಬೆಂಬಲಕ್ಕಾಗಿ ಸಂಘಟಕರು ಕಾಯುತ್ತಿದ್ದಾರೆ ಎಂದು ಜಪಾನ್ ನ ಆರ್ಥಿಕ ಸಚಿವ ಯಸುತೋಶಿ ನಿಶಿಮುರಾ ಹೇಳಿದ್ದಾರೆ.ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚುತ್ತದೆ ಎಂದು ಅನೇಕ ಜನರು ಚಿಂತಿತರಾಗಿದ್ದಾರೆಂದು ನನಗೆ ತಿಳಿದಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರ್ಧಾರವನ್ನು ಆಧರಿಸಿ ಟೋಕಿಯೊ ಒಲಿಂಪಿಕ್ಸ್ 2020 ಆಯೋಜಿಸಲು ಸಂಘಟಕರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಶುಕ್ರವಾರ ಹೊಕ್ಕೈಡೋ ಪ್ರಾಂತ್ಯ ಸೇರಿದಂತೆ ಮೂರು ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ.