ಇಂಡಿಗೋ ಸಿಬ್ಬಂದಿಯಿಂದ ಅನುಚಿತ ವರ್ತನೆ, ಭಾರಿ ಮೊತ್ತದ ಶುಲ್ಕ ವಸೂಲಿ: ಈಜುಪಟು ಶ್ರೀಹರಿ ನಟರಾಜ್ ಆರೋಪ ಇಂಡಿಗೋ ವಿಮಾನದ ಸಿಬ್ಬಂದಿ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಅಲ್ಲದೇ, ಹೆಚ್ಚುವರಿ ಲಗೇಜ್ ಗಾಗಿ ದೊಡ್ಡ ಮೊತ್ತವನ್ನು ವಿಧಿಸಿರುವುದಾಗಿ ಏಸ್ ಇಂಡಿಯಾ ಈಜುಪಟ್ಟು ಶ್ರೀ ಹರಿ ನಟರಾಜ್ ಆರೋಪಿಸಿದ್ದಾರೆ. ರಾಜ್ ಕೋಟ್: ಇಂಡಿಗೋ ವಿಮಾನದ ಸಿಬ್ಬಂದಿ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಅಲ್ಲದೇ, ಹೆಚ್ಚುವರಿ ಲಗೇಜ್ ಗಾಗಿ ದೊಡ್ಡ ಮೊತ್ತವನ್ನು ವಿಧಿಸಿರುವುದಾಗಿ ಏಸ್ ಇಂಡಿಯಾ ಈಜುಪಟ್ಟು ಶ್ರೀ ಹರಿ ನಟರಾಜ್ ಆರೋಪಿಸಿದ್ದಾರೆ. ಗುಜರಾತ್ ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಗೇಮ್ಸ್ ನಲ್ಲಿ ಪಾಲ್ಗೊಂಡು, ಮನೆಗೆ ವಾಪಸ್ಸಾಗುತ್ತಿದ್ದಾಗ ಈ ಅಹಿತಕರ ಘಟನೆ ನಡೆದಿರುವುದಾಗಿ ಅವರು ಹೇಳಿದ್ದಾರೆ.2022 ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕೆಲವು ಅದ್ಭುತ ಪ್ರದರ್ಶನ ನೀಡಿದ 21 ವರ್ಷದ ಒಲಿಂಪಿಯನ್, ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಸ್ಪರ್ಧಿಸಿದ್ದರು. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ವಿವಿಧ ವಿಭಾಗಗಳಲ್ಲಿ ಆರು ಚಿನ್ನದ ಪದಕಗಳನ್ನು ಗಳಿಸಿದರು.ಸೋಮವಾರ ಬೆಳಿಗ್ಗೆ ಸರಣಿ ಟ್ವೀಟ್‌ ಮಾಡಿರುವ ನಟರಾಜ್, ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಿಂದ ಹಿಂತಿರುಗುತ್ತಿದ್ದಾಗ ಇಂಡಿಯೋ ಸಿಬ್ಬಂದಿ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ಅಲ್ಲದೇ ಕ್ರೀಡಾಕೂಟದಲ್ಲಿ ಜಯಿಸಿದ ಪದಕಗಳು ಮತ್ತು ಹೆಚ್ಚುವರಿ ಸಾಮಾಗ್ರಿಗಾಗಿ ನಮಗೆ ಭಾರಿ ಮೊತ್ತವನ್ನು ವಿಧಿಸಿರುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ತೆಲುಗು ಭಾಷಿಕ ಮಹಿಳೆಗೆ ಅವಮಾನ; ವ್ಯಾಪಕ ಆಕ್ರೋಶಹೆಚ್ಚುವರಿ ಸಾಮಾನು ಸರಂಜಾಮುಗಳಿಗೆ ವಿಧಿಸಲಾದ ಮೊತ್ತ ತನಗೆ ದೊಡ್ಡ ಸಮಸ್ಯೆಯಲ್ಲ, ಆದರೆ ವಿಮಾನ ನಿಲ್ದಾಣದಲ್ಲಿ ಏರ್‌ಲೈನ್ಸ್ ಸಿಬ್ಬಂದಿ ನನ್ನನ್ನು ನಡೆಸಿಕೊಂಡ ರೀತಿ ತೀವ್ರ ಬೇಸರಗೊಳಿಸಿದೆ. ಸಹ ಆಟಗಾರರನ್ನು ಸಹ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. @IndiGo6E , , .ನಾವು ಗೆದ್ದ ಪದಕಗಳನ್ನು ನಾವು ಸ್ಥಳದಲ್ಲಿಯೇ ಬಿಟ್ಟುಬಿಡಬೇಕೇ? ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯನ್ನು ಪ್ರಶ್ನಿಸಿದ್ದಾರೆ. ನಟರಾಜ್ ಚೊಚ್ಚಲ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಈಜು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ರಾಜ್ ಕೋಟ್ ಗೆ ಬಂದಿದ್ದರು.