ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಪ್ರಶಸ್ತಿ: ರಾಂಕಿರೆಡ್ಡಿ-ಚಿರಾಗ್ ಜೋಡಿ, ಪ್ಯಾರಾ ಶೆಟ್ಲರ್ ಪ್ರಮೋದ್ ನಾಮನಿರ್ದೇಶನ ಭಾರತೀಯ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರನ್ನು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) 'ವರ್ಷದ ಅತ್ಯಂತ ಸುಧಾರಿತ ಆಟಗಾರ' ( ) ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ, ನವದೆಹಲಿ: ಭಾರತೀಯ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರನ್ನು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) 'ವರ್ಷದ ಅತ್ಯಂತ ಸುಧಾರಿತ ಆಟಗಾರ' ( ) ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ,ಈ ವರ್ಷದ ಫ್ರೆಂಚ್ ಓಪನ್ ಸೂಪರ್ 750 ಈವೆಂಟ್‌ನ ಫೈನಲ್‌ಗೆ ತಲುಪಿದ್ದ ಈ ಜೋಡಿ ಥಾಯ್ ಲ್ಯಾಂಡ್ ಓಪನ್‌ನಲ್ಲಿ ತನ್ನ ಮೊದಲ ಸೂಪರ್ 500 ಪ್ರಶಸ್ತಿಯನ್ನು ಪಡೆದುಕೊಂಡಿದೆ.ಇದಲ್ಲದೆ ಈ ವರ್ಷ 11 ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗಳಿಸಿರುವ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಅವರನ್ನು 'ವರ್ಷದ ಪುರುಷ ಪ್ಯಾರಾ-ಬ್ಯಾಡ್ಮಿಂಟನ್ ಆಟಗಾರ' ( - ) ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.ಡಿಸೆಂಬರ್ 11 ರಿಂದ 15 ರವರೆಗೆ ನಡೆಯಲಿರುವ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್‌ನ ಎರಡನೇ ಆವೃತ್ತಿಯ ಉದ್ಘಾಟನಾ ಸಮಾರಂಭ ಮತ್ತು ಗಾಲಾ ಡಿನ್ನರ್‌ನಲ್ಲಿ ಚೀನಾದ ಗೌಂಗ್ಮೌನಲ್ಲಿ ಡಿಸೆಂಬರ್ 9ರಂದು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.