ರಾಷ್ಟ್ರೀಯ ಕಿರಿಯರ ಶೂಟಿಂಗ್ ಚಾಂಪಿಯನ್‌ಶಿಪ್: ಆಯುಷಿಗೆ ಬೆಳ್ಳಿ ಭೂಪಾಲ್‌ನಲ್ಲ ನಡೆಯುತ್ತಿರುವ ರಾಷ್ಟ್ರೀಯ ಕಿರಿಯರ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಶ್ಚಿಮ ಬಂಗಾಳದ ಆಯುಷಿ ಪಡ್ಡಾರ್ ಅವರು 50 ಮೀ. ರೈಫಲ್ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಕೋಲ್ಕತಾ: ಭೂಪಾಲ್‌ನಲ್ಲ ನಡೆಯುತ್ತಿರುವ ರಾಷ್ಟ್ರೀಯ ಕಿರಿಯರ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಶ್ಚಿಮ ಬಂಗಾಳದ ಆಯುಷಿ ಪಡ್ಡಾರ್ ಅವರು 50 ಮೀ. ರೈಫಲ್ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.ಅರ್ಹತಾ ಸುತ್ತಿನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಆಯುಷಿ ಪಡ್ಡಾರ್, 1200 ಅಂಕಗಳಲ್ಲಿ 1159 ಪಾಯಿಂಟ್ ಕಲೆ ಹಾಕುವ ಮೂಲಕ ಫೈನಲ್‌ಗೆ ಪ್ರವೇಶ ಮಾಡಿದ್ದರು. ಪ್ರಶಸ್ತಿ ಸುತ್ತಿನಲ್ಲಿ ಬಲವಾಗಿ ಪುಟಿದೆದ್ದ 19ರ ಪ್ರಾಯದ ಶೂಟರ್ 451.1 ಪಾಯಿಂಟ್ ಕಲೆ ಹಾಕಿದರು. ಕೇವಲ 0.8ರ ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾದರು.ಹರಿಯಾಣದ ನಿಶ್ಚಲ್ (451.9) ಅವರು ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ಮಧ್ಯ ಪ್ರದೇಶದ ಪ್ರಸಿದ್ಧಿ ಮಹಂತ್ (436.1) ಕಂಚಿನ ಪದಕ ತನ್ನದಾಗಿಸಿಕೊಂಡರು.