ಕೊರಿಯಾ ಮಾಸ್ಟರ್ಸ್: ಶ್ರೀಕಾಂತ್, ಸಮೀರ್ ಮುನ್ನಡೆ, ಸೌರಭ್ ವರ್ಮಾ ಔಟ್ ಕೊರಿಯಾ ಮಾಸ್ಟರ್ಸ್‌ನಲ್ಲಿ ಭಾರತ ಉತ್ತಮ ಪ್ರಾರಂಬವನ್ನು ಕಂಡಿದ್ದು ಬುಧವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಶಟ್ಲರ್‌ಗಳಾದ ಕಿಡಂಬಿ ಶ್ರೀಕಾಂತ್ ಮತ್ತು ಸಮೀರ್ ವರ್ಮಾ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಗ್ವಾಂಗ್‍ಜು(ಕೊರಿಯಾ): ಕೊರಿಯಾ ಮಾಸ್ಟರ್ಸ್‌ನಲ್ಲಿ ಭಾರತ ಉತ್ತಮ ಪ್ರಾರಂಬವನ್ನು ಕಂಡಿದ್ದು ಬುಧವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಶಟ್ಲರ್‌ಗಳಾದ ಕಿಡಂಬಿ ಶ್ರೀಕಾಂತ್ ಮತ್ತು ಸಮೀರ್ ವರ್ಮಾ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಶ್ರೀಕಾಂತ್ 21-18 21-17 ಸೆಟ್ ಗಳಿಂದ ಹಾಂಕಾಂಗ್ ನ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರನ್ನು ಸೋಲಿಸಿದ್ದರೆ ಜಪಾನ್‌ನ ಕಝುಮಾಸಾ ಸಾಕಿ ಕಣದಿಂದ ಹಿಂದೆ ಸರಿದ ಪರಿಣಾಮ ಸಮೀರ್ ವರ್ಮಾ ಸಹ ದ್ವಿತೀಯ ಸುತ್ತು ಪ್ರವೇಶಿಸಿದರು.ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ವಿಜೇತರಾಗಿದ್ದ ಸೌರಭ್ ವರ್ಮಾ ಎರಡನೇ ಆಟದಲ್ಲಿ ಸ್ಥಳೀಯರಾದ ಕಿಮ್ ದೊಂಗ್‍ಹುನ್ ವಿರುದ್ಧ 21-13, 12-21, 13-21ರಿಂದ ಪರಾಜಿತರಾಗಿ ಪಂದ್ಯಾವಳಿಯಿಂದ ಹೊರಬಿದ್ದರು.