ಟೋಕಿಯೊ ಒಲಂಪಿಕ್ಸ್: ಸೋಮವಾರ ಭಾರತ ಪುರುಷರ ಹಾಕಿ ತಂಡಕ್ಕೆ ಸನ್ಮಾನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಭಾರತ ಹಾಕಿ ಪುರುಷರ ತಂಡಕ್ಕೆ ಸೋಮವಾರ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಭಾರತ ಹಾಕಿ ಪುರುಷರ ತಂಡಕ್ಕೆ ಸೋಮವಾರ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಟೋಕಿಯೊದಿಂದ ಭಾರತ ತಂಡ ದೇಶಕ್ಕೆ ಮರಳಿದ ಬಳಿಕ ಪುರುಷರ ಹಾಕಿ ತಂಡವನ್ನು ಸನ್ಮಾನಿಸಲಾಗುತ್ತದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೋಮವಾರ ಅಭಿನಂದಿಸಲಿದ್ದಾರೆ.41 ವರ್ಷಗಳ ಬಳಿಕ ಮೊದಲ ಬಾರಿಗೆ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದೆ. ಓಯಿ ಹಾಕಿ ಸ್ಟೇಡಿಯಂ-ನಾರ್ತ್ ಪಿಚ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಜರ್ಮನಿಯನ್ನು 5-4ರಿಂದ ಸೋಲಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟಿತ್ತು. ಅಲ್ಲದೆ ಈ ಅಮೋಘ ಗೆಲುವಿನ ಶ್ರೇಯವನ್ನು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜೀವ ಉಳಿಸಲು ಕೆಲಸ ಮಾಡುತ್ತಿರುವ ಎಲ್ಲಾ ಕೋವಿಡ್ -19 ಯೋಧರಿಗೆ ಸಮರ್ಪಿಸಿದೆ.