2017. 2018, 2019ನೇ ಸಾಲಿನ ಏಕಲವ್ಯ, ಕರ್ನಾಟಕ ಕ್ರೀಡಾ ರತ್ನ ಪುರಸ್ಕಾರ ಘೋಷಣೆ 2017. 2018, 2019ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಳನ್ನು ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ, ಯುವ ಸಬಲೀಕರಣ, ಕ್ರೀಡಾ ಸಚಿವರಾದ ಸಿಟಿ ರವಿ ಘೋಷಿಸಿದ್ದಾರೆ. ಬೆಂಗಳೂರು: 2017. 2018, 2019ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಳನ್ನು ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ, ಯುವ ಸಬಲೀಕರಣ, ಕ್ರೀಡಾ ಸಚಿವರಾದ ಸಿಟಿ ರವಿ ಘೋಷಿಸಿದ್ದಾರೆ.2017ನೇ ಸಾಲಿನಲ್ಲಿ 14 ಮಂದಿಗೆ ಏಕಲವ್ಯ, 10 ಜನರಿಗೆ ಕರ್ನಾಟಕ ಕ್ರೀಡಾ ರತ್ನ ಹಾಗೂ ಇಬ್ಬರಿಗೆ ಜೀವಮಾನ ಸಾಧನೆ ಪುರಸ್ಕಾರ ಲಭಿಸಿದ್ದರೆ 2018ರ ಸಾಲಿನಲ್ಲಿ 9 ಮಂದಿಗೆ ಏಕಲವ್ಯ, ಏಳು ಜನರಿಗೆ ಕರ್ನಾಟಕ ಕ್ರೀಡಾ ರತ್ನ, ಇಬ್ಬರಿಗೆ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಇನ್ನು 2019ನೇ ಸಾಲಿನಲ್ಲಿ ಎಂಟು ಜನರಿಗೆ ಏಕಲವ್ಯ, 9 ಮಂದಿಗೆ ಕರ್ನಾಟಕ ಕ್ರೀಡಾ ರತ್ನ ಹಾಗೂ ಇಬ್ಬರಿಗೆ ಜೀವಮಾನ ಸಾಧನೆ ಪುರಸ್ಕಾರ ಘೋಷಣೆಯಾಗಿದೆ.ವೇದಾ ಕೃಷ್ಣಮೂರ್ತಿ, ಮಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್ ಮೊದಲಾದವರು ಪ್ರಶಸ್ತಿ ಪಟ್ಟಿಯಲ್ಲಿದ್ದಾರೆ.ಎಂ.ಫ್ರೆಡ್ರಿಕ್ಸ್, ಡಾ.ಪಟೇಲ್ ಮೊಹಮದ್ ಇಲಿಯಾಸ್, ಸಿ.ಎಂ ಕುರುಂಬಯ್ಯ, ಮಂಜುನಾಥ್.ಆರ್, ಶಾಂತಾ ರಂಗಸ್ವಾಮಿ ಹಾಗೂ ಸಂಜೀವ್ ಆರ್ ಕನಕ ಅವರುಗಳಿಗೆ ಜೀವಮಾನ ಸಾಧನೆ ಪುರಸ್ಕಾರ ನೀಡಲಾಗಿದೆ.ಪ್ರಶಸ್ತಿ ಪುರಸ್ಕೃತರ ಪೂರ್ಣ ಪಟ್ಟಿ ಹೀಗಿದೆ-