ಶತಕದ ಸನಿಹದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವ ಫುಟ್ಬಾಲ್ ಕ್ರೀಡೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಂತಾರಾಷ್ಟ್ರೀಯ 100 ಗೋಲುಗಳ ಸನಿಹದಲಿದ್ದಾರೆ. ಲಿಸ್ಬನ್: ವಿಶ್ವ ಫುಟ್ಬಾಲ್ ಕ್ರೀಡೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಂತಾರಾಷ್ಟ್ರೀಯ 100 ಗೋಲುಗಳ ಸನಿಹದಲಿದ್ದಾರೆ. ಶುಕ್ರವಾರ ತಡರಾತ್ರಿ ನಡೆದಿದ್ದ 2020ರ ಯುರೋ ಪಂದ್ಯದಲ್ಲಿ ರೊನಾಲ್ಡೊ ಅವರ ಗೋಲು ನೆರವಿನಿಂದ ಪೋರ್ಚುಗಲ್ ತಂಡ 3-0 ಅಂತರದಲ್ಲಿ ಲುಕ್ಸೆಮ್‍ಬರ್ಗ್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಹಾದಿ ಜೀವಂತವಾಗಿರಿಸಿಕೊಂಡಿತು. ಕಳೆದ ರಾತ್ರಿ ನಡೆದಿದ್ದ ಪಂದ್ಯದಲ್ಲಿ ರೊನಾಲ್ಡೊ ಅವರು ವೃತ್ತಿ ಜೀವನದ 94ನೇ ಅಂತಾರಾಷ್ಟ್ರೀಯ ಗೋಲುಗಳನ್ನು ಪೂರ್ಣಗೊಳಿಸಿದರು. ಒಟ್ಟಾರೆ, ಎಲ್ಲ ಮಾದರಿಯಲ್ಲಿ ಜುವೆಂಟಾಸ್ ಮುಂಚೂಣಿ ಆಟಗಾರ 699 ಗೋಲುಗಳನ್ನು ಸಿಡಿಸಿದ್ದಾರೆ.