ಪುಟ್ಬಾಲ್ ಆಡುತ್ತಿದ್ದಂತೆಯೇ ನೆಲಕ್ಕೆ ಕುಸಿದು ಪುಟ್ಬಾಲ್ ಆಟಗಾರ ಸಾವು ಪಶ್ಚಿಮ ಬಂಗಾಳ ಮಾಜಿ ಆಟಗಾರ ಹಾಗೂ ಮಹೂನ್ ಬೆಗಾನ್ ಡಿಫೆಂಡರ್ ರಾಧಾಕೃಷ್ಣನ್ ಧನರಾಜನ್ ಅವರು ಫುಟ್ಬಾಲ್ ಪಂದ್ಯವಾಡುತ್ತಿದ್ದ ವೇಳೆ ನೆಲಕ್ಕೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಕೊಚ್ಚಿ: ಪಶ್ಚಿಮ ಬಂಗಾಳ ಮಾಜಿ ಆಟಗಾರ ಹಾಗೂ ಮಹೂನ್ ಬೆಗಾನ್ ಡಿಫೆಂಡರ್ ರಾಧಾಕೃಷ್ಣನ್ ಧನರಾಜನ್ ಅವರು ಫುಟ್ಬಾಲ್ ಪಂದ್ಯವಾಡುತ್ತಿದ್ದ ವೇಳೆ ನೆಲಕ್ಕೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.ಭಾನುವಾರ ರಾತ್ರಿ ಮಲಪ್ಪುುರಂ ಜಿಲ್ಲೆಯ ಪೆರಿಂತಲಮನ್ನದಲ್ಲಿ ನಡೆಯುತ್ತಿದ್ದ ಸೆವೆನ್‌ಸ್‌ ಫುಟ್ಬಾಲ್ ಪಂದ್ಯದಲ್ಲಿ 39ರ ಪ್ರಾಯದ ಧನಂಜಯ್ ಆಡುತ್ತಿದ್ದರು. ಈ ವೇಳೆ ಅವರಿಗೆ ಆಕಸ್ಮಿಕವಾಗಿ ಎದೆ ನೋವು ಮತ್ತು ಉಸಿರುಗಟ್ಟಿ ನೆಲಕ್ಕೆ ಉರುಳಿದರು.ತಕ್ಷಣ ಇವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಧನಂಜಯ್ ಅವರನ್ನು ಪರಿಶೀಲಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿದ್ದಾರೆಂದು ಖಚಿತಪಡಿಸಿದರು. ಎಫ್.ಸಿ ಪೆರಿಂತಲಮನ್ನ ಹಾಗೂ ಸಸ್ಥಾ ತ್ರಿಸ್ಸೂರ್ ನಡುವಿನ ಪಂದ್ಯದ 27ನೇ ನಿಮಿಷದಲ್ಲಿ ಈ ಘಟನೆ ನಡೆದಿತ್ತು.