ಏಷ್ಯನ್ ಕುಸ್ತಿ: ಭಾರತಕ್ಕೆ ತ್ರಿವಳಿ ಸ್ವರ್ಣ ಸಂಭ್ರಮ ಭಾರತದ ಸೂಪರ್‌ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಶುಕ್ರವಾರ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ. ಚೆನ್ನೈ: ಭಾರತದ ಸೂಪರ್‌ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಶುಕ್ರವಾರ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ.ಚೀನೀ ಮತ್ತು ಜಪಾನಿನ ಪ್ರತಿಸ್ಪರ್ಧಿಗಳ ಅನುಪಸ್ಥಿತಿಯಲ್ಲಿ ವಿನೇಶ್ ಅವರು 53 ಕೆಜಿ ವಿಭಾಗದಲ್ಲಿ ಒಂದೂ ಪಾಯಿಂಟ್ ಕಳೆದುಕೊಳ್ಳದೆ ಪ್ರಶಸ್ತಿಯನ್ನು ಗೆದ್ದರು. ದಿವ್ಯಾ ಕಕ್ರನ್, ಅನ್ಶುಗೆ ಚಿನ್ನ, ಸಾಕ್ಷಿಗೆ ಬೆಳ್ಳಿಈ ಕ್ರೀಡಕೂಟದಲ್ಲಿ ದಿವ್ಯಾ ಕಕ್ರನ್ (72 ಕೆಜಿ) ಚಿನ್ನ ಹಾಗೂ ಸಾಕ್ಷಿ ಮಲಿಕ್ (65 ಕೆಜಿ) ಬೆಳ್ಳಿ ಪದಕ ಗಳಿಸಿಕೊಂಡಿದ್ದಾರೆ. ಈ ಮೂಲಕ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ದಿವ್ಯಾ ಪಾತ್ರವಾಗಿದ್ದಾರೆ. ಅನ್ಶು ಮಲಿಕ್ (57 ಕೆಜಿ) ಭಾರತಕ್ಕೆ ಇನ್ನೊಂದು ಚಿನ್ನದ ಪದಕ ತಂದು ಕೊಟ್ಟಿದ್ದಾರೆ.ಗುರುವಾರ ಸರಿತಾ ಮೊರ್ (59 ಕೆಜಿ) ಚಿನ್ನದ ಪದಕ ಗಳಿಸಿದ್ದರೆ ಸೀಮಾ ಬಿಸ್ಲಾ (50 ಕೆಜಿ) ಮತ್ತು ಪೂಜಾ (76 ಕೆಜಿ) ಕಂಚಿನ ಪದಕ ತಮ್ಮದಾಗಿಸಿಕೊಂಡರು.ಈ ಆವೃತ್ತಿಯಲ್ಲಿ ಭಾರತ ನಾಲ್ಕು ಚಿನ್ನ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದೆ. ಮತ್ತು ಇದೆಲ್ಲವನ್ನೂ ಮಹಿಳೆಯರ ವಿಭಾಗದ ಸ್ಪರ್ಧೆಯಿಂದಲೇ ಪಡೆದದ್ದಾಗಿದೆ ಎನ್ನುವುದು ಗಮನಾರ್ಹ.ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: ಸರಿತಾಗೆ ಸ್ವರ್ಣ ಪದಕ