ವಿಶ್ವಕುಸ್ತಿ: ರಾಹುಲ್ ಅವೇರ್ ಗೆ ಕಂಚು ಭಾರತೀಯ ಕುಸ್ತಿಪಟು ರಾಹುಲ್ ಅವೇರ್ ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಇದಕ್ಕೆ ಮುನ್ನ ಯುವ ಕ್ರೀಡಾಪಟು ದೀಪಕ್ ಪುನಿಯಾ ಬೆಳ್ಳಿ ಗಳಿಸಿ ಗಾಯದ ಸಮಸ್ಯೆಯಿಂದಾಗಿ ಫೈನಲ್ಸ್ ನಿಂದ ಹೊರಬಂದಿದ್ದರು. ನೂರ್-ಸುಲ್ತಾನ್ (ಕಝಕಿಸ್ತಾನ): ಭಾರತೀಯ ಕುಸ್ತಿಪಟು ರಾಹುಲ್ ಅವೇರ್ ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಇದಕ್ಕೆ ಮುನ್ನ ಯುವ ಕ್ರೀಡಾಪಟು ದೀಪಕ್ ಪುನಿಯಾ ಬೆಳ್ಳಿ ಗಳಿಸಿ ಗಾಯದ ಸಮಸ್ಯೆಯಿಂದಾಗಿ ಫೈನಲ್ಸ್ ನಿಂದ ಹೊರಬಂದಿದ್ದರು.ರಾಹುಲ್ 61 ಕೆಜಿ ವಿಭಾಗದಲ್ಲಿ 2017ರ ಪ್ಯಾನ್-ಅಮೇರಿಕಾ ಚಾಂಪಿಯನ್ ಟೈಲರ್ ಲೀ ಗ್ರಾಫ್ ಅವರನ್ನು 11-4 ಅಂತರದಿಂದ ಹಿಂದಿಕ್ಕಿ ಕಂಚಿನ ಪದಕ ಗಳಿಸಿಕೊಳ್ಳುವ ಮೂಲಕ ಭಾರತದ ಪದಕಗಳ ಸಂಖ್ಯೆಯನ್ನು ಐದಕ್ಕೆ ಹೆಚ್ಚಿಸಿದ್ದಾರೆ.ಇದಕ್ಕೆ ಹಿಂದೆ ಭಾರತ 2013 ರಲ್ಲಿಅಮೀರ್ ದಾಹಿಯಾ (ಬೆಳ್ಳಿ), ಭಜರಂಗ್ ಪುನಿಯಾ (ಕಂಚು) ಮತ್ತು ಸಂದೀಪ್ ತುಳಸಿ ಯಾದವ್ (ಗ್ರೀಕೋ-ರೋಮನ್‌ನಲ್ಲಿ ಕಂಚು) ಗಳಿಸಿದ ಸಾಧನೆ ಂಆಡಿತ್ತು. ಈ ಬಾರಿ ಮತ್ತೆರಡು ಹೆಚ್ಚುವರಿ ಪದಕ ಗಳಿಸಿ ಪದಕ ಪಟ್ಟಿಯಲ್ಲಿ ಭಡ್ತಿ ಪಡೆದಿದೆ.ಮಹಾರಾಷ್ಟ್ರದ ರಾಹು;ಲ್ ಈ ಹಿಂದೆ 2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ (2009, 2011) ಎರಡು ಕಂಚಿನ ಪದಕ ಗಳಿಸಿಕೊಂಡಿದ್ದರು./