ಸಾರ್ವಭೌಮ ಸಂಪತ್ತು ನಿಧಿ ಹರಿವು: ಚೀನಾಗಿಂತ ಮೂರು ಪಟ್ಟು ಹೆಚ್ಚು ಭಾರತದಲ್ಲಿ ಹೂಡಿಕೆ! ಖಾಸಗಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾರ್ವಭೌಮ ಸಂಪತ್ತು ನಿಧಿ ಹರಿವು ಚೀನಾಗಿಂತಲೂ ಭಾರತದಲ್ಲಿ ಹೆಚ್ಚಾಗಿದ್ದು, ಚೀನಾಗಿಂತ ಮೂರು ಪಟ್ಟು ಹೆಚ್ಚು ಭಾರತದಲ್ಲಿ ಹೂಡಿಕೆ ಮಾಡಲಾಗಿದೆ. ನವದೆಹಲಿ: ಖಾಸಗಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾರ್ವಭೌಮ ಸಂಪತ್ತು ನಿಧಿ ಹರಿವು ಚೀನಾಗಿಂತಲೂ ಭಾರತದಲ್ಲಿ ಹೆಚ್ಚಾಗಿದ್ದು, ಚೀನಾಗಿಂತ ಮೂರು ಪಟ್ಟು ಹೆಚ್ಚು ಭಾರತದಲ್ಲಿ ಹೂಡಿಕೆ ಮಾಡಲಾಗಿದೆ.ಇದು ಭಾರತದೆಡೆಗೆ ಹೂಡಿಕೆದಾರರ ಆಕರ್ಷಣೆ ಹೆಚ್ಚಾಗಿದೆ ಎಂಬುದು ಈ ಮೂಲಕ ಸಾಬೀತಾಗಿದೆ. ಅಂದಾಜು 400 ವಿದೇಶಿ ಸಾರ್ವಭೌಮ ಸಂಪತ್ತು ನಿಧಿಗಳಿಗೆ ಸಂಬಂಧಿಸಿದ ಡಾಟವನ್ನು ಹೊಂದಿರುವ ನ್ಯೂಯಾರ್ಕ್-ಮೂಲದ ಗ್ಲೋಬಲ್ ಎಸ್ ಡಬ್ಲ್ಯೂಎಫ್ ನ ಅಂಕಿಂಶಗಳ ಪ್ರಕಾರ 2020 ರಲ್ಲಿ ಭಾರತದಲ್ಲಿ ದಾಖಲೆ ಪ್ರಮಾಣದ 14.8 ಬಿಲಿಯನ್ ಡಾಲರ್ ನಷ್ಟು ನಿಧಿ ಹೂಡಿಕೆಯಾಗಿದ್ದು ಇದು ಚೀನಾದಲ್ಲಿ ಹೂಡಿಕೆಯಾಗಿರುವ (4.5 ಬಿಲಿಯನ್ ಡಾಲರ್) ಗಿಂತಲೂ ಮೂರು ಪಟ್ಟು ಹೆಚ್ಚಿನದ್ದಾಗಿದೆ. ಈ ವರ್ಷವಷ್ಟೇ ವ್ಯತ್ಯಾಸ ಹೆಚ್ಚಾಗಿದೆ. ಆದರೆ 2019 ರಲ್ಲೇ ಇದಕ್ಕೆ ಸಂಬಂಧಿಸಿದ ಲಕ್ಷಣಗಳು ಸ್ಪಷ್ಟವಾಗಿದ್ದವು. 2019 ರಲ್ಲಿ ಭಾರತದಲ್ಲಿ 10.1 ಬಿಲಿಯನ್ ಡಾಲರ್ ಮೊತ್ತದ ವೆಲ್ತ್ ಫಂಡ್ಸ್ ಹೂಡಿಕೆಯಾಗಿದ್ದರೆ ಚೀನಾದಲ್ಲಿ 6.4 ಬಿಲಿಯನ್ ಡಾಲರ್ ಮೊತ್ತದ ವೆಲ್ತ್ ಫಂಡ್ಸ್ ಹೂಡಿಕೆಯಾಗಿತ್ತು.2015-18 ರ ಅವಧಿಯಲ್ಲಿ ಚೀನಾದಲ್ಲಿ 46 ಬಿಲಿಯನ್ ಡಾಲರ್ ನಷ್ಟು ವಿದೇಶಿ ವೆಲ್ತ್ ಫಂಡ್ಸ್ ಹೂಡಿಕೆಯಾಗಿದ್ದರೆ ಅದೇ ಅವಧಿಯಲ್ಲಿ ಭಾರತದಲ್ಲಿ 24.6 ಬಿಲಿಯನ್ ಡಾಲರ್ ನಷ್ಟು ಹೂಡಿಕೆಯಾಗಿತ್ತು.