ಮತ್ತೆ ತೈಲೋತ್ಪನ್ನಗಳ ಬೆಲೆ ಹೆಚ್ಚಳ: ಬೆಂಗಳೂರಿನಲ್ಲಿ ಪೆಟ್ರೋಲ್ ದರ 25 ಪೈಸೆ, ಡೀಸೆಲ್ 29 ಪೈಸೆ ಏರಿಕೆ ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ದಾಖಲೆ ಮಟ್ಟಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ನವದೆಹಲಿ: ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ದಾಖಲೆ ಮಟ್ಟಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.ಭಾನುವಾರ ಮತ್ತೆ ದೇಶದಲ್ಲಿ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ 24 ರಿಂದ 26 ಪೈಸೆ ಮತ್ತು ಡೀಸೆಲ್ ದರ 28-30 ಪೈಸೆಯಷ್ಟು ಏರಿಕೆಯಾಗಿದೆ. ಆ ಮೂಲಕ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ 100 ರೂ ಗಡಿದಾಟಿದೆ. ಕಳೆದೊಂದು ವಾರದ ಅಂತರದಲ್ಲಿ ಸತತ ನಾಲ್ಕನೇ ಬಾರಿಗೆ ತೈಲೋತ್ಪನ್ನಗಳ ದರ ಏರಿಕೆ ಮಾಡಲಾಗಿದೆ. & 92.58 83.22 & - 98.88 & 90.40 #, 94.31 & 88.07 # 92.67 & 86.06 # ../nalDN6C6USಇಂದಿನ ದರ ಏರಿಕೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ 92.64ರೂ ಮತ್ತು ಡೀಸೆಲ್ 83.28ರೂ ಗೆ ಏರಿಕೆಯಾಗಿದೆ. ಅಂತೆಯೇ ಕೋಲ್ಕತಾದಲ್ಲಿ ಪೆಟ್ರೋಲ್ 92.72ರೂ, ಡೀಸೆಲ್ 86.12 ರೂಗೆ ಏರಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ 98.93ರೂ, ಡೀಸೆಲ್ 90.45ರೂಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 94.36ರೂ ಮತ್ತು ಡೀಸೆಲ್ 88.12ರೂ ಗೆ ಏರಿಕೆಯಾಗಿದೆ.ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ 95.72ರೂ- ಡೀಸೆಲ್ 88.28ರೂಗೆ ಏರಿಕೆಯಾಗಿದೆ. ಅಂತೆಯೇ ಹೈದರಾಬಾದ್ ನಲ್ಲಿ ಪೆಟ್ರೋಲ್ 96.28ರೂ ಮತ್ತು ಡೀಸೆಲ್ 90.79ರೂಗೆ ಏರಿಕೆಯಾಗಿದೆ.