ಬೆಂಗಳೂರು-ಸೀಟೆಲ್ ನಡುವೆ ನೇರ ವಿಮಾನ ಸಂಚಾರ ಅಮೆರಿಕನ್ ಏರ್ ಲೈನ್ಸ್ ಸಂಸ್ಥೆಯು ಇದೇ ಅಕ್ಟೋಬರ್ ನಿಂದ ಬೆಂಗಳೂರು-ಸೀಟೆಲ್ ನಗರಗಳ ನಡುವೆ ನೇರ ವಿಮಾನ ಸಂಚಾರ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ ನವದೆಹಲಿ: ಅಮೆರಿಕನ್ ಏರ್ ಲೈನ್ಸ್ ಸಂಸ್ಥೆಯು ಇದೇ ಅಕ್ಟೋಬರ್ ನಿಂದ ಬೆಂಗಳೂರು-ಸೀಟೆಲ್ ನಗರಗಳ ನಡುವೆ ನೇರ ವಿಮಾನ ಸಂಚಾರ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆಸೀಟೆಲ್-ಬೆಂಗಳೂರು ನಡುವಿನ ಮೊದಲ ಮೊದಲ ವಿಮಾನಯಾನದ ಮುಂಗಡ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಈತಿಂಗಳಾಂತ್ಯಕ್ಕೆ ಪ್ರಾರಂಭ ಮಾಡಲಾಗುವುದಾಗಿ ಕಂಪೆನಿ ಹೇಳಿದೆ.ಈ ಸೇವೆಯ ಮೂಲಕ ಭಾರತದ ಪ್ರಯಾಣಿಕರು, ನಾಗರಿಕರು ಸೀಟೆಲ್ ನಗರ ತಲುಪಿ, ಅಲ್ಲಿಂದ ಅಮೆರಿಕದ ಬೇರೆ, ಬೇರೆ, 70 ನಗರಗಳಿಗೆ ಪ್ರಯಾಣ ಮಾಡುವ ಹೊಸ ಅನುಕೂಲ, ಅವಕಾಶ ದೊರಕಲಿದೆ ಎಂದೂ ಸಂಸ್ಥೆ ತಿಳಿಸಿದೆ.