ಕೆನರಾ ಬ್ಯಾಂಕ್ ವಂಚನೆ ಕೇಸ್: ಯುನಿಟೆಕ್ ಎಂಡಿ ವಿರುದ್ಧ ಸಿಬಿಐನಿಂದ ಪ್ರಕರಣ ದಾಖಲು ಕೆನರಾ ಬ್ಯಾಂಕಿನ 198 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಆರೋಪದಡಿ ಸಿಬಿಐ ಯುನಿಟೆಕ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ, ಅವರ ತಂದೆ ರಮೇಶ್ ಮತ್ತು ಸಹೋದರ ಅಜಯ್ ವಿರುದ್ಧ ಪ್ರಕರಣ ದಾಖಲಿಸಿದೆ. ನವದೆಹಲಿ: ಕೆನರಾ ಬ್ಯಾಂಕಿನ 198 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಆರೋಪದಡಿ ಸಿಬಿಐ ಯುನಿಟೆಕ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ, ಅವರ ತಂದೆ ರಮೇಶ್ ಮತ್ತು ಸಹೋದರ ಅಜಯ್ ವಿರುದ್ಧ ಪ್ರಕರಣ ದಾಖಲಿಸಿದೆ.ಸಂಜಯ್ ಚಂದ್ರವಿರುದ್ಧ ಹೊಸ ಪ್ರಕರಣ ದಾಖಲಿಸಿದ ನಂತರ ಸಿಬಿಐ ಆರೋಪಿಗಳಿಗೆ ಸೇರಿದ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿದೆ. ವೈದ್ಯಕೀಯ ಆಧಾರದ ಮೇಲೆ ದೆಹಲಿ ನ್ಯಾಯಾಲಯವು 43 ತಿಂಗಳ ನಂತರ ಸಂಜಯ್ ಚಂದ್ರ ಅವರಿಗೆ ಮಧ್ಯಂತರ ಜಾಮೀನು ನೀಡಿದ ನಂತರ ಅವರನ್ನು ತಿಹಾರ್ಜೈಲಿನಿಂದ ಬಿಡುಗಡೆ ಮಾಡಲಾಗಿದೆ.ದೆಹಲಿ ಪೊಲೀಸ್, ಸಿಬಿಐ ಮತ್ತು ಇಡಿ ಸೇರಿದಂತೆ ಹಲವಾರು ಏಜೆನ್ಸಿಗಳು ಕಂಪನಿಯ ವಿರುದ್ಧ ನ್=ತನಿಖೆ ನಡೆಸುತ್ತಿವೆ. 2ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಸಂಜಯ್ ಚಂದ್ರ ತ ಪಾತ್ರವೂ ಕಾಣಿಸಿಕೊಂಡಿತ್ತು ಆದರೆ ಆವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದೆ.ಚಂದ್ರ ಅವರ ವೈಯಕ್ತಿಕ ಮತ್ತು ಸಾಂಸ್ಥಿಕ ಖಾತರಿಗಳ ಆಧಾರದ ಮೇಲೆ ಕಂಪನಿಯು ಅದರಿಂದ ಸಾಲ ಸೌಲಭ್ಯಗಳನ್ನು ಪಡೆಯುತ್ತಿದೆ ಎಂದು ಕೆನರಾ ಬ್ಯಾಂಕ್ ಆರೋಪಿಸಿದೆ. ಆದರೆ ನಂತರದಲ್ಲಿ ವಸತಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತವಾಗಿದ್ದ ಕಾರಣ ಕಂಪನಿಯು ಪಾವತಿಗಳನ್ನು ವಿಳಂಬ ಮಾಡಲು ಪ್ರಾರಂಭಿಸಿತು. ಕಂಪನಿಯ ನಿಯಂತ್ರಣವನ್ನು ಸರ್ಕಾರ ವಹಿಸಿಕೊಂಡಿತ್ತು ಮತ್ತು ಕಂಪನಿಯ ಹಣಕಾಸು ಕುರಿತು ಗ್ರಾಂಟ್ ಥಾರ್ಟನ್ ಅವರ ವಿಧಿವಿಜ್ಞಾನ ಲೆಕ್ಕಪರಿಶೋಧನೆಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಫೋರೆನ್ಸಿಕ್ ಲೆಕ್ಕಪರಿಶೋಧನೆಯಲ್ಲಿ ಕಂಪನಿಯು ಹಣವನ್ನು ಬೇರೆಡೆಗೆ ವರ್ಗಾಯಿಸಿದೆದುರುಪಯೋಗಪಡಿಸಿಕೊಂಡಿದೆ ಎಂಬ ಅಂಶ ಪತ್ತೆಯಾಗಿತ್ತು.ಕಂಪನಿಯು ನಂಬಿಕೆ ದ್ರೋಹ ಮಾಡಿದೆಅಡಮಾನದ ಅರಿವಿಲ್ಲದೆ ಮೂರನೇ ವ್ಯಕ್ತಿಯ ಪರವಾಗಿ ಸುಳ್ಳು ಮಾಲೀಕತ್ವವನ್ನು ಸೃಷ್ಟಿಸಿದೆ ಎಂದು ಬ್ಯಾಂಕ್ ಆರೋಪಿಸಿದೆ. ಕಂಪನಿಯು 198 ಕೋಟಿ ರೂ.ಗಳ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಬ್ಯಾಂಕ್ ಆರೋಪಿಸಿದೆ.