ಅವ್ಯವಹಾರ ಮುಚ್ಚಿಡಲು ಪಿಎಂಸಿ ಬ್ಯಾಂಕ್ ನಿಂದ ಬರೋಬ್ಬರಿ 21 ಸಾವಿರ ನಕಲಿ ಖಾತೆ ಸೃಷ್ಟಿ! ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್(ಪಿಎಂಸಿ) ದೊಡ್ಡ ಮಟ್ಟದ ಅವ್ಯವಹಾರದಲ್ಲಿ ತೊಡಗಿದ್ದು ಬರೋಬ್ಬರಿ 21 ಸಾವಿರ ನಕಲಿ ಖಾತೆಗಳನ್ನು ಸೃಷ್ಟಿಸಲಾಗಿತ್ತು ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದ್ದಾರೆ. ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್(ಪಿಎಂಸಿ) ದೊಡ್ಡ ಮಟ್ಟದ ಅವ್ಯವಹಾರದಲ್ಲಿ ತೊಡಗಿದ್ದು ಬರೋಬ್ಬರಿ 21 ಸಾವಿರ ನಕಲಿ ಖಾತೆಗಳನ್ನು ಸೃಷ್ಟಿಸಲಾಗಿತ್ತು ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದ್ದಾರೆ. ಹೌಸಿಂಗ್ ಡೆವಲಪ್‌ಮೆಂಟ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ವಾಧವನ್ ಮತ್ತು ಅವರ ಪುತ್ರ ಸಾರಂಗ್ ನನ್ನು ಬಂಧಿಸಿದ್ದು ನಂತರ ನಗರ ಪೊಲೀಸರ ಆರ್ಥಿಕ ಅಪರಾಧ ವಿಭಾಗಗಳು ಮಾಹಿತಿಯನ್ನು ಬಹಿರಂಗಪಡಿಸಿವೆ.ಈ ಸಂಬಂಧ ಕೋರ್ಟ್ ರಾಕೇಶ್ ವಾಧವನ್ ಮತ್ತು ಸಾರಂಗ್ ರನ್ನು ಅಕ್ಟೋಬರ್ 9ರವರೆಗೆ ಪೊಲೀಸ್ ವಶಕ್ಕೆ ನೀಡಿದೆ. ಬ್ಯಾಂಕ್ ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ತಪ್ಪೊಪ್ಪಿಕೊಂಡಿದ್ದು ಸುಮಾರು 6.500 ಕೋಟಿ ರೂ. ಅವ್ಯವಹಾರವನ್ನು ಮುಚ್ಚಿಡಲಾಗಿತ್ತು ಎಂದು ಹೇಳಿದ್ದಾರೆ. 10 ವರ್ಷಗಳ ಕಾಲ ಆರ್ಬಿಐಗೆ ತಪ್ಪು ವರದಿ ಸಲ್ಲಿಸುತ್ತಿದ್ದ ಪಿಎಂಸಿ ಬ್ಯಾಂಕ್ ನ 6 ಅಧಿಕಾರಿಗಳು ಇದಕ್ಕಾಗಿ 21,049 ನಕಲಿ ಖಾತೆಗಳನ್ನು ತೆರೆದಿದ್ದರು ಎಂಬುದು ಇದೀಗ ಬಯಲಾಗಿದೆ. ಮುಂಬೈ ಮೂಲದ ನಿರ್ಮಾಣ ವಲಯದ ಎಚ್‌ಡಿಐಎಲ್ ಕಂಪನಿಯು ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ ನಿಂದ ಪಡೆದಿದ್ದ ಸಾಲ ಮರು ವಸೂಲಾಗದೆ 6,500 ಕೋಟಿ ರೂ,ಗಳ ಅವ್ಯವಹಾರವಾಗಿದೆ.