ಬುಧವಾರದಿಂದ ಮೂರು ದಿನ ಗೋ ಫಸ್ಟ್ ವಿಮಾನ ಸೇವೆ ಸ್ಥಗಿತ! ಹಣಕಾಸು ಬಿಕ್ಕಟ್ಟಿನ ಕಾರಣ 'ಗೋ ಫಸ್ಟ್' ವಿಮಾನಯಾನ ಕಂಪನಿಯು ಬುಧವಾರದಿಂದ ಮೂರು ದಿನಗಳ ಕಾಲ ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ. ಮುಂಬೈ: ಹಣಕಾಸು ಬಿಕ್ಕಟ್ಟಿನ ಕಾರಣ 'ಗೋ ಫಸ್ಟ್' ವಿಮಾನಯಾನ ಕಂಪನಿಯು ಬುಧವಾರದಿಂದ ಮೂರು ದಿನಗಳ ಕಾಲ ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ.ಈ ಹಿಂದೆ ಮೇ 3 ಮತ್ತು 4 ರಂದು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗುವುದು ಎಂದು ಈ ಹಿಂದೆ ಗೋ ಫಸ್ಟ್ ಸಿಇಒ ಕೌಶಿಕ್ ಖೋನಾ ಹೇಳಿದ್ದರು. ಇದೀಗ ಮೇ 5 ರಂದು ಕೂಡಾ ವಿಮಾನಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ. ಗೋ ಫಸ್ಟ್' ಪ್ರತಿದಿನ ಸುಮಾರು 180-185 ವಿಮಾನಗಳ ನಿರ್ವಹಣೆ ಮಾಡುತಿತ್ತು.ವಿಮಾನ ಹಾರಾಟಗಳ ಅನಿಶ್ಚಿತತೆ ಮಧ್ಯೆ ಗೋ ಫಸ್ಟ್ ಟಿಕೆಟ್‌ಗಳಿಗೆ ಸಂಪೂರ್ಣ ಮರು ಪಾವತಿ ಮಾಡುವುದಾಗಿ ಹೇಳಿದೆ. ಮೇ 3, 4 ಮತ್ತು 5 ನೇ ರಂದು ನಿಗದಿಪಡಿಸಲಾದ ಗೋ ಫಸ್ಟ್ ಫ್ಲೈಟ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ. ವಿಮಾನ ರದ್ದತಿಯಿಂದ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಏರ್‌ಲೈನ್ ತನ್ನ ವೆಬ್‌ಸೈಟ್‌ನಲ್ಲಿ ನೋಟಿಸ್‌ನಲ್ಲಿ ತಿಳಿಸಿದೆ.ಇದನ್ನೂ ಓದಿ: ಸೂಚನೆ ನೀಡದೆ ಏಕಾಏಕಿ ವಿಮಾನಗಳ ಹಾರಾಟ ರದ್ದುಪಡಿಸಿದ ಗೋ ಫಸ್ಟ್: ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರಿಗೆ ಸಮಸ್ಯೆ"ವಿಮಾನ ರದ್ದತಿಯಿಂದ ನಿಮ್ಮ ಪ್ರಯಾಣದ ಯೋಜನೆಗಳನ್ನು ಅಡ್ಡಿಪಡಿಸಿರಬಹುದು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ನಿಮ್ಮ ತಾಳ್ಮೆಗಾಗಿ ನಾವು ಧನ್ಯವಾದಗಳು ಎಂದು ಅದು ಹೇಳಿದೆ.