ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಪೇಟಿಎಂ ಸಾಥ್, ಪ್ರಧಾನಿ ನಿಧಿಗೆ 500 ಕೋಟಿ ರೂ ದೇಣಿಗೆ! ಮಾರಕ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಕೈ ಜೋಡಿಸಿದ್ದು, ಪ್ರಧಾನಿ ಮಂತ್ರಿಗಳ ನಿಧಿಗೆ 500 ಕೋಟಿ ರೂಗಳ ದೇಣಿಗೆ ನೀಡುವುದಾಗಿ ಹೇಳಿಕೆ ನೀಡಿದೆ. ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಕೈ ಜೋಡಿಸಿದ್ದು, ಪ್ರಧಾನಿ ಮಂತ್ರಿಗಳ ನಿಧಿಗೆ 500 ಕೋಟಿ ರೂಗಳ ದೇಣಿಗೆ ನೀಡುವುದಾಗಿ ಹೇಳಿಕೆ ನೀಡಿದೆ.ಭಾರತದಲ್ಲಿ ವ್ಯಾಪಕ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ನಿರ್ಮೂಲನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ಮಾಡಿರುವ ಪಿಎಂ ಕೇರ್ಸ್ ಫಂಡ್ ಗೆ ದೇಶಾದ್ಯಂತ ನೂರಾರು ಕೋಟಿ ರೂಗಳ ದೇಣಿಗೆ ಸಂಗ್ರಹವಾಗುತ್ತಿದ್ದು, ಈ ಪಟ್ಟಿಗೆ ಇದೀಗ ಖ್ಯಾತ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಕೂಡ ಸೇರ್ಪಡೆಯಾಗಿದೆ. fundಗೆ 500 ಕೋಟಿ ರೂ. ಧನ ಸಹಾಯ ನೀಡುವ ಗುರಿಹೊಂದಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.ಇದನ್ನೂ ಓದಿ: ಕೋವಿಡ್ -19: ತಲಾ 1 ಕೋಟಿ ರೂ. ದೇಣಿಗೆ ನೀಡುವಂತೆ ರಾಜ್ಯಸಭಾ ಸದಸ್ಯರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮನವಿಸಂಸ್ಥೆಯ ಹೇಳಿಕೆಯಲ್ಲಿ ಪೇಟಿಎಂ () ವ್ಯಾಲೆಟ್, ಯುಪಿಐ () ಹಾಗೂ ಡೆಬಿಟ್ ಕಾರ್ಡ್ ಗಳನ್ನು ಉಪಯೋಗಿಸಿ ಮಾಧ್ಯಮದಿಂದ ಮಾಡಲಾಗಿರುವ ಪ್ರತಿ ಹಣದ ವಹಿವಾಟಿನ ಮೇಲೆ ತಾನು ಪ್ರಧಾನಿ ನಿಧಿಗೆ ರೂ.10 ಹೆಚ್ಚುವರಿ ಕೊಡುಗೆ ನೀಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲ ಆಪ್ ಹಾಗೂ ಅದರ ಇನ್ಸ್ಟ್ರುಮೆಂಟ್ಸ್ ಮಾಧ್ಯಮದ ಮೂಲಕ ಮಾಡಲಾಗುವ ಪ್ರತಿ ಹಣ ಪಾವತಿಗೆ 10 ರೂ. ಹೆಚ್ಚುವರಿ ಕೊಡುಗೆ ತನ್ನ ಪರವಾಗಿ ನೀಡಲಿದೆ.ಇದನ್ನೂ ಓದಿ: ಕೊರೋನಾ ವೈರಸ್: ಕೋವಿಡ್ 19 ದಾಳಿಗೆ ಜನರು ಮಾತ್ರರಲ್ಲ, ಇಂಟರ್ ನೆಟ್ ಗೂ ಭಾರಿ ಪೆಟ್ಟು, ಕಾರಣ ಏನು ಗೊತ್ತಾ?ಇವುಗಳ ಜೊತೆಗೆ ಕಂಪನಿ ಈ ವೈರಸ್ ವಿರುದ್ಧ ಹೋರಾಟ ನಡೆಸಲು ತಯಾರಿಸಲಾಗಿರುವ ಚಿಕಿತ್ಸೆಯ ಉಪಕರಣಗಳು ಹಾಗೂ ಔಷದಿ ತಯಾರಿಸುವಲ್ಲಿ ನಿರತರಾಗಿರುವ ತಜ್ಞರಿಗಾಗಿ 5 ಕೋಟಿ ರೂ. ಗಳ ನಿಧಿ ಸ್ಥಾಪಿಸಿದೆ. ಈ ಮೂಲಕ ತಾನು ಪ್ರಧಾನಿ ನಿಧಿಗೆ 500 ಕೋಟಿ ರೂ ದೇಣಿಗೆ ಸಂಗ್ರಹ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿಕೊಂಡಿದೆ. ಇದೇ ಕಾರಣಕ್ಕಾಗಿ ದೇಶದ ನಾಗರಿಕರ ಪ್ರಾಣ ಉಳಿಸಲು ಬಳಕೆದಾರರು ದೊಡ್ಡ ಪ್ರಮಾಣದಲ್ಲಿ ಹಣ ನೆರವು ನೀಡುವಂತೆ ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಪ್ರಧಾನಿ ಪರಿಹಾರ ನಿಧಿಗೆ ಜೆಎಸ್ ಡಬ್ಲ್ಯೂ ಗ್ರೂಪ್ 100 ಕೋಟಿ ರೂ ದೇಣಿಗೆ ಘೋಷಣೆ ಗೆ ನೀಡಲಾಗುವ ಕೊಡುಗೆಗಳಿಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 10 ಮತ್ತು 139 ರ ಅಡಿ ಸಂಪೂರ್ಣ ತೆರಿಗೆ ವಿನಾಯ್ತಿ ನೀಡಲಾಗುತ್ತಿದೆ. ₹500 . , , ₹10. !