ಜನವರಿಯಲ್ಲಿ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ ಶೇ. 2.2ರಷ್ಟು ವೃದ್ಧಿ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಸೂಚ್ಯಂಕ ಕಳೆದ ಜನವರಿಯಲ್ಲಿ ಹಿಂದಿನ ವರ್ಷದ ಡಿಸೆಂಬರ್ ನ ಶೇ. 2.1ಕ್ಕೆ ಹೋಲಿಸಿದರೆ ಈ ವರ್ಷದ ಜನವರಿಯಲ್ಲಿ ಶೇ. 2.2ರಷ್ಟು ವೃದ್ಧಿಸಿದೆ ಎಂದು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ನವದೆಹಲಿ: ಎಂಟು ಪ್ರಮುಖ ಕೈಗಾರಿಕಾ ವಲಯಗಳ ಸೂಚ್ಯಂಕ ಕಳೆದ ಜನವರಿಯಲ್ಲಿ ಹಿಂದಿನ ವರ್ಷದ ಡಿಸೆಂಬರ್ ನ ಶೇ. 2.1ಕ್ಕೆ ಹೋಲಿಸಿದರೆ ಈ ವರ್ಷದ ಜನವರಿಯಲ್ಲಿ ಶೇ. 2.2ರಷ್ಟು ವೃದ್ಧಿಸಿದೆ ಎಂದು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. 2019ರ ಏಪ್ರಿಲ್ ನಿಂದ 2020 ರ ಜನವರಿವರೆಗೆ ಸೂಚ್ಯಂಕದ ಸಂಚಿತ ಬೆಳವಣಿಗೆ ಶೇ 0.6ರಷ್ಟಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.ಕಳೆದ ವರ್ಷದ ಜನವರಿಗೆ ಹೋಲಿಸಿದರೆ ಕಲ್ಲಿದ್ದಲು ಉತ್ಪಾದನೆ ಜನವರಿಯಲ್ಲಿ ಶೇ. 8.0 ರಷ್ಟು ವೃದ್ಧಿಸಿದೆ. ಇದರ ಸಂಚಿತ ಸೂಚ್ಯಂಕ 2019-20ರ ಏಪ್ರಿಲ್ ನಿಂದ ಜನವರಿ ಅವಧಿಯಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 2.4 ರಷ್ಟು ಕುಸಿದಿದೆ.ಕಚ್ಚಾ ತೈಲ ಉತ್ಪಾದನೆ ಕಳೆದ ವರ್ಷದ ಜನವರಿಗೆ ಹೋಲಿಸಿದರೆ ಈ ವರ್ಷದ ಜನವರಿಯಲ್ಲಿ ಶೇಕ 5.3 ರಷ್ಟು ಕುಸಿದಿದೆ. ಅದರ ಸಂಚಿತ ಸೂಚ್ಯಂಕ 2019-20ರ ಏಪ್ರಿಲ್ ನಿಂದ ಜನವರಿ ಅವಧಿಯಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 6.0 ರಷ್ಟು ಕುಸಿದಿದೆ.ನೈಸರ್ಗಿಕ ಅನಿಲ ಉತ್ಪಾದನೆ ಕಳೆದ ಜನವರಿಯಲ್ಲಿ ಶೇ 9.1 ರಷ್ಟು ಕುಸಿದಿದೆ. ಅದರ ಸಂಚಿತ ಸೂಚ್ಯಂಕ 2019-20ರ ಏಪ್ರಿಲ್ ನಿಂದ ಜನವರಿ ಅವಧಿಯಲ್ಲಿ ಶೇ 4.3 ರಷ್ಟು ಕುಸಿದಿದೆ.ಪೆಟ್ರೋಲಿಯಂ ಶುದ್ಧೀಕರಣ ಉತ್ಪಾದನೆ ಕಳೆದ ಜನವರಿಯಲ್ಲಿ ಶೇ 1.9 ರಷ್ಟು ವೃದ್ಧಿಸಿದ್ದರೆ, ರಸಗೊಬ್ಬರ ಉತ್ಪಾದನೆ ಶೇ 0.1 ರಷ್ಟು ಕುಸಿದಿದೆ.ಉಕ್ಕು ಉತ್ಪಾದನೆ ಕಳೆದ ಜನವರಿಯಲ್ಲಿ ಶೇ 2.2 ರಷ್ಟು ಮತ್ತು ಸಿಮೆಂಟ್ ಉತ್ಪಾದನೆ ಶೇ 5.0 ರಷ್ಟು ವೃದ್ಧಿಸಿದೆ.ವಿದ್ಯುತ್ ಉತ್ಪಾದನೆ ಕಳೆದ ಜನವರಿಯಲ್ಲಿ 2019ರ ಇದೇ ಅವಧಿಗೆ ಹೋಲಿಸಿದರೆ ಶೇ 2.8 ರಷ್ಟು ಏರಿಕೆಯಾಗಿದೆ.