ವಿದೇಶಿ ವಿನಿಮಯ ಮೀಸಲು 3.5 ಬಿಲಿಯನ್ ಡಾಲರ್ ನಿಂದ 599.53 ಬಿಲಿಯನ್ ಡಾಲರ್ ಗೆ ಏರಿಕೆ! ಸತತ ಎರಡನೇ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಏರಿಕೆ ಕಂಡಿದ್ದು, 3.55 ಬಿಲಿಯನ್ ಇದ್ದ ಫಾರೆಕ್ಸ್ ಮೀಸಲು ಈಗ 599.53 ಬಿಲಿಯನ್ ಡಾಲರ್ ಗೆ ಜಿಗಿದಿದೆ. ನವದೆಹಲಿ: ಸತತ ಎರಡನೇ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಏರಿಕೆ ಕಂಡಿದ್ದು, 3.55 ಬಿಲಿಯನ್ ಇದ್ದ ಫಾರೆಕ್ಸ್ ಮೀಸಲು ಈಗ 599.53 ಬಿಲಿಯನ್ ಡಾಲರ್ ಗೆ ಜಿಗಿದಿದೆ.ಆರ್ ಬಿಐ ಈ ಬಗ್ಗೆ ಮಾಹಿತಿ ನೀಡಿದ್ದು, ಒಟ್ಟಾರೆ ಮೀಸಲು 7.2 ಬಿಲಿಯನ್ ಡಾಲರ್ ನಿಂದ 595.98 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.ಇದನ್ನೂ ಓದಿ: ಫೆಮಾ ಉಲ್ಲಂಘನೆ: ಶಿಯೋಮಿಯ 5,551 ಕೋಟಿ ರೂ. ಜಪ್ತಿ ಆದೇಶ ಎತ್ತಿಹಿಡಿದ ಹೈಕೋರ್ಟ್2021 ರ ಅಕ್ಟೋಬರ್ ನಲ್ಲಿ ವಿದೇಶಿ ವಿನಿಮಯ ಮೀಸಲು ದಾಖಲೆಯ 654 ಬಿಲಿಯನ್ ಡಾಲರ್ ಗೆ ತಲುಪಿತ್ತು. ಜಾಗತಿಕ ಬೆಳವಣಿಗೆಗಳಿಂದ ಉಂಟಾಗುವ ಒತ್ತಡಗಳ ನಡುವೆ ರೂಪಾಯಿಯನ್ನು ರಕ್ಷಿಸಲು ಕೇಂದ್ರೀಯ ಬ್ಯಾಂಕ್ ವಿದೇಶಿ ವಿನಿಮಯಗಳನ್ನು ಉಪಯೋಗಿಸುವುದರಿಂದ ಮೀಸಲು ಕುಸಿಯುತ್ತಿದೆ.