ಸಾರ್ವಜನಿಕ ಉಪಯುಕ್ತತೆ ಸೇವೆಗೆ ಬ್ಯಾಂಕಿಂಗ್ ವಲಯ ಸೇರ್ಪಡೆ: ಕೇಂದ್ರ ಆದೇಶ ಬ್ಯಾಂಕ್ ಉದ್ಯಮವನ್ನು ಮುಂದಿನ ಆರು ತಿಂಗಳ ಕಾಲ ಸಾರ್ವಜನಿಕ ಉಪಯುಕ್ತ ಸೇವೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ನವದೆಹಲಿ: ಬ್ಯಾಂಕ್ ಉದ್ಯಮವನ್ನು ಮುಂದಿನ ಆರು ತಿಂಗಳ ಕಾಲ ಸಾರ್ವಜನಿಕ ಉಪಯುಕ್ತ ಸೇವೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.ಈ ಆದೇಶ ಏಪ್ರಿಲ್ 21ರಿಂದ ಅಕ್ಟೋಬರ್ 21ರವರೆಗೆ ಅನ್ವಯವಾಗಲಿದೆ. ಕೊರೋನಾ ವೈರಸ್ ಸೊಂಕಿನ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ವಲಯವನ್ನು ಸಾರ್ವಜನಿಕ ಉಪಯುಕ್ತದ ಸೇವೆಯಡಿ ತಂದಿರುವುದರಿಂದ ಬ್ಯಾಂಕ್ ಉದ್ಯೋಗಿಗಳು ಈ ಅವಧಿಯಲ್ಲಿ ಯಾವುದೇ ಪ್ರತಿಭಟನೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ.ಈ ಕುರಿತು ಹಣಕಾಸು ಸೇವೆಗಳ ಇಲಾಖೆ ಏ.20ರಂದು ಆದೇಶ ಹೊರಡಿಸಿತ್ತು. ಆದರೆ, ಈ ಆದೇಶಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಎದುರಾಗಿದೆ. ಸರ್ಕಾರ ಬ್ಯಾಂಕ್ ಉದ್ಯೋಗಿಗಳ ಮೂಲ ಹಕ್ಕುಗಳನ್ನು ನಿರ್ಲಕ್ಷಿಸಿದೆ ಎಂದು ಜನರು ಆರೋಪಿಸಿದ್ದಾರೆ.