ಸಾಲ ವಂಚನೆ ಪ್ರಕರಣ: ಯೆಸ್ ಬ್ಯಾಂಕ್ ಎಂ.ಡಿ, ಸಿ ಇ ಒ ರಾಣಾ ಕಪೂರ್ ವಿರುದ್ಧ ಚಾರ್ಜ್ ಶೀಟ್ ಜಾರಿ ರಾಣಾ ಕಪೂರ್ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನವದೆಹಲಿಯ ಪ್ರತಿಷ್ಟಿತ ಪ್ರದೇಶದಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಆಸ್ತಿ ಖರೀದಿಸಿದ್ದಾರೆ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ನವದೆಹಲಿ: ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಯೆಸ್ ಬ್ಯಾಂಕ್ ಎಂ.ಡಿ ಮತ್ತು ಸಿಇಒ ರಾಣಾ ಕಪೂರ್ ಮತ್ತು ಅವರ ಪತ್ನಿ ಬಿಂದು ಕಪೂರ್ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಾಂತ ಸಂಸ್ಥೆಯ ಮಾಲೀಕ ಗೌತಮ್ ಥಾಪರ್ ಹೆಸರೂ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: 1,819 ಕೋಟಿ ರೂ. ಮೌಲ್ಯದ ಅತಿ ದೊಡ್ಡ ನಕಲಿ ವಂಚನೆ ಜಾಲ ಪತ್ತೆ: ಇಬ್ಬರ ಬಂಧನಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಈ ಚಾರ್ಜ್ ಶೀಟ್ ಜಾರಿ ಮಾಡಿದೆ. ಯೆಸ್ ಬ್ಯಾಂಕ್ ಎಂ.ಡಿ ಮತ್ತು ಸಿಇಒ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನವದೆಹಲಿಯ ಪ್ರತಿಷ್ಟಿತ ಪ್ರದೇಶದಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಎಸ್ಎಂಎಸ್ ಹುಡುಗಿ 'ಮೀನಾ' ಆಮಿಷ ಒಡ್ಡಿ ಪುರುಷರನ್ನು ವಂಚಿಸುವ ಜಾಲ ಪತ್ತೆ!ಈ ಖರೀದಿ ರಾಣಾ ಕಪೂರ್ ಅವರ ಪತ್ನಿ ಬಿಂದು ಕಪೂರ್ ಅವರ ಸಂಸ್ಥೆಯ ಹೆಸರಿನಲ್ಲಿ ನಡೆಸಲಾಗಿದೆ. ಖರೀದಿ ನಂತರ ರಾಣಾ ಕಪೂರ್ ಅವರು ಗೌತಂ ಥಾಪರ್ ಅವರ ಹಲವು ಸಂಸ್ಥೆಗಳಿಗೆ 1,360 ಕೋಟಿ ರೂ. ಸಾಲ ಮಂಜೂರು ಮಾಡಿದ್ದರು.ಇದನ್ನೂ ಓದಿ: ವಂಚನೆ ಪ್ರಕರಣ: ಸಲ್ಮಾನ್ ಖಾನ್, ಇತರ 8 ಮಂದಿಗೆ ಚಂಡೀಘರ್ ಪೋಲೀಸರಿಂದ ಸಮನ್ಸ್ ಜಾರಿಈ ಸಾಲದ ಮೊತ್ತವನ್ನು ಅವರು ಯಾವುದಕ್ಕೆ ಬಳಸಲಾಗುತ್ತದೆ ಎಂದು ನಮೂದಿಸಲಾಗಿತ್ತೋ ಆ ಕಾರ್ಯಗಳಿಗೆ ವಿನಿಯೋಗವಾಗದೇ ಇರುವುದು ಸಿಬಿಐ ತನಿಖೆಯಲ್ಲಿ ತಿಳಿದುಬಂದಿತ್ತು. ರೀಟ್ ಹಗರಣ: ಬಿಜೆಪಿ ಆಡಳಿತದಲ್ಲಿ ಪರೀಕ್ಷೆಗಳಲ್ಲಿ ವ್ಯಾಪಕ ವಂಚನೆ- ದೋಟಾಸ್ರಾ ವಾಗ್ದಾಳಿನಟ ಸೋನು ಸೂದ್ ಮತ್ತು ಸಹಚರರಿಂದ 20 ಕೋಟಿ ರೂ. ಗೂ ಅಧಿಕ ತೆರಿಗೆ ವಂಚನೆ: ಆದಾಯ ತೆರಿಗೆ ಇಲಾಖೆಬೆಂಗಳೂರು: ವರ್ಕ್ ಫ್ರಂ ಹೋಮ್ ಕೆಲಸದ ನೆಪದಲ್ಲಿ ವಂಚನೆ; 3.5 ಕೋಟಿ ರೂ. ವಶನಾಯಿಮರಿಗೆ 66 ಲಕ್ಷ ರೂ. ತೆತ್ತು ಮೋಸ ಹೋದ ಡೆಹರಾಡೂನ್ ಮಹಿಳೆ: ಬೆಂಗಳೂರು ನಿವಾಸಿಯಿಂದ ವಂಚನೆಬಿಬಿಎಂಪಿಗೆ ರಾಕ್‌ಲೈನ್ ವೆಂಕಟೇಶ್ ಕೋಟ್ಯಂತರ ರು. ತೆರಿಗೆ ವಂಚನೆ: ಎನ್.ಆರ್. ರಮೇಶ್ ಆರೋಪ