ಕರ್ನಾಟಕದ ಹೆಮ್ಮೆ, ಮೈಸೂರು ಸ್ಯಾಂಡಲ್ ಸೋಪ್: ಮಾಸಿಕ ರೂ.133 ಕೋಟಿಗೂ ಅಧಿಕ ವಹಿವಾಟು ಕರ್ನಾಟಕದ ಹೆಮ್ಮೆ, ಐತಿಹಾಸಿಕ ಮೈಸೂರು ಸ್ಯಾಂಡಲ್ ಸೋಪ್ ಉತ್ತಮವಾಗಿ ಮಾರಾಟವಾಗುತ್ತಿದ್ದು, ಮಾಸಿಕ ರೂ. 133 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದೆ. ಬೆಂಗಳೂರು: ಕರ್ನಾಟಕದ ಹೆಮ್ಮೆ, ಐತಿಹಾಸಿಕ ಮೈಸೂರು ಸ್ಯಾಂಡಲ್ ಸೋಪ್ ಉತ್ತಮವಾಗಿ ಮಾರಾಟವಾಗುತ್ತಿದ್ದು, ಮಾಸಿಕ ರೂ. 133 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ಕಂಪನಿಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಈ ವರ್ಷದ ನವೆಂಬರ್ ನಲ್ಲಿ ಮಾಸಿಕ ಉತ್ಪಾದನೆ 4,144 ಮೆಟ್ರಿಕ್ ಟನ್ ದಾಟಿರುವುದಾಗಿ ತಿಳಿಸಿದ್ದಾರೆ. ಕರ್ನಾಟಕದ ಹೆಮ್ಮೆ: ಐತಿಹಾಸಿಕ #ಮೈಸೂರುಸ್ಯಾಂಡಲ್_ಸೋಪ್ ಕಂಪನಿಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ, ನವೆಂಬರ್ 2023 ರಲ್ಲಿ: ಮಾಸಿಕ ಉತ್ಪಾದನೆ 4144 ಮೆಟ್ರಿಕ್ ಟನ್ ದಾಟಿದೆ. ಮಾಸಿಕ ಮಾರಾಟ: ರೂ. 133 ಕೋಟಿಗೂ ಅಧಿಕ ವಹಿವಾಟು ನಡೆದಿದೆ. ಯಾವುದೇ ಹೆಚ್ಚುವರಿ ಹೂಡಿಕೆಯಿಲ್ಲದೆ, ಸುಧಾರಿತ ದಕ್ಷತೆಯಿಂದ ಈ ಸಾಧನೆ ಸಾಧ್ಯವಾಗಿದೆ.… ../hIBKbhbX0tಮಾಸಿಕ ರೂ.133 ಕೋಟಿಗೂ ಅಧಿಕ ವಹಿವಾಟು ನಡೆದಿದೆ.ಯಾವುದೇ ಹೆಚ್ಚುವರಿ ಹೂಡಿಕೆಯಿಲ್ಲದೆ, ಸುಧಾರಿತ ದಕ್ಷತೆಯಿಂದ ಈ ಸಾಧನೆ ಸಾಧ್ಯವಾಗಿದೆ. ಈ ವರ್ಷ ಕೆಎಸ್ ಡಿಎಲ್ ವಾರ್ಷಿಕ ಆದಾಯ 2,000 ಕೋಟಿ ದಾಟಬೇಕು.ಮುಂದಿನ ಐದು ವರ್ಷಗಳಲ್ಲಿ, ವಾರ್ಷಿಕ ಆದಾಯ 1 ಬಿಲಿಯನ್ ಡಾಲರ್ ಗೆ ತಲುಪಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.