ಇನ್ಫೋಸಿಸ್, ವಿಪ್ರೊ ಸಂಸ್ಥೆಯ ಇಬ್ಬರು ಉದ್ಯೋಗಿಗಳಿಗೆ ಸ್ಟಾಕ್ ಮಾರ್ಕೆಟ್ ನಿರ್ಬಂಧ ಹೇರಿದ ಸೆಬಿ 2020ರ ಇನ್ಫೋಸಿಸ್ ವ್ಯಾನ್ ಗಾರ್ಡ್ ಒಪ್ಪಂದದ ಸಮಯದಲ್ಲಿ ಆರೋಪಿಗಳು ಅಕ್ರಮ ಎಸಗಿದ್ದರು. ಸೆಬಿ ಆರೋಪಿಗಳಿಂದ 2.69 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ. ಬೆಂಗಳೂರು: ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ( ) ಇನ್ಫೋಸಿಸ್ ಮತ್ತು ವಿಪ್ರೊ ಸಂಸ್ಥೆಯ ಒಬ್ಬ ಉದ್ಯೋಗಿಯನ್ನು ಷೇರು ಮಾರುಕಟ್ಟೆಯಿಂದ ಬಹಿಷ್ಕರಿಸಿದೆ. ಇದನ್ನೂ ಓದಿ: ರಾಜ್ ಕುಂದ್ರಾ, ಶಿಲ್ಪಾಶೆಟ್ಟಿಗೆ 3 ಲಕ್ಷ ರೂ. ದಂಡ ವಿಧಿಸಿದ ಸೆಬಿರಮಿತ್ ಚೌದ್ರಿ ಮತ್ತು ಕೆಯುರ್ ಮನಿಯಾರ್ ಎಂಬುವವರೇ ಸೆಬಿಯಿಂದ ನಿರ್ಬಂಧಕ್ಕೆ ತುತ್ತಾದವರು. ಈ ಇಬ್ಬರೂ ವ್ಯಕ್ತಿಗಳು ಅಕ್ರಮ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಸೆಬಿ ತಿಳಿಸಿದೆ. 2020ರ ಇನ್ಫೋಸಿಸ್- ವ್ಯಾನ್ ಗಾರ್ಡ್ ಸಂಸ್ಥೆಗಳ ನಡುವಿನ ಒಪ್ಪಂದದ ಸಮಯದಲ್ಲಿ ಆರೋಪಿಗಳು ಅಕ್ರಮ ಎಸಗಿದ್ದರು. ಸೆಬಿ ಆರೋಪಿಗಳಿಂದ 2.69 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ. ಇನ್ಫೋಸಿಸ್ ವ್ಯಾನ್ ಗಾರ್ಡ್ ಒಪ್ಪಂದ ಕಾರ್ಯಕ್ರಮದಲ್ಲಿ ಆರೋಪಿಗಳು ಸಂಸ್ಥೆಯ ಪರವಾಗಿ ನೇರವಾಗಿ ಭಾಗಿಯಾಗಿದ್ದರು.ಇದನ್ನೂ ಓದಿ: ಸೆಬಿ ಉನ್ನತ ಅಧಿಕಾರಿಗಳ ಕಚೇರಿ ಮೇಲೆ ಸಿಬಿಐ ದಾಳಿ!ಹೀಗಾಗಿ ಆರೋಪಿಗಳಿಗೆ ಒಪ್ಪಂದದ ಅನೇಕ ಗೌಪ್ಯ ಮಾಹಿತಿ ತಿಳಿದಿದ್ದವು. ಅದರ ಆಧಾರದಲ್ಲಿ ಷೇರು ವ್ಯವಹಾರ ನಡೆಸಿರುವುದನ್ನು ಸೆಬಿ ಪತ್ತೆ ಹಚ್ಚಿತ್ತು.ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ ಹೀಗಿದೆ2022 ದ್ವಿತಿಯಾರ್ಧದಲ್ಲಿ ಸರ್ಕಾರ 5.03 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ: ಹಣಕಾಸು ಸಚಿವಾಲಯನಾಸ್ಡಾಕ್ ಪಟ್ಟಿಗೆ ಸೇರಿದ ಮೊದಲ ಭಾರತೀಯ ಸ್ಟಾರ್ಟ್ ಅಪ್ ಚೆನ್ನೈ ನ ಫ್ರೆಶ್ ವರ್ಕ್ಸ್!ಉದ್ಯಮ, ಹೂಡಿಕೆದಾರರಿಗೆ ಏಕ ಗವಾಕ್ಷಿ ವ್ಯವಸ್ಥೆಗೆ ಕೇಂದ್ರ ಸಚಿವ ಪಿಯೂಷ್ ಗೊಯಲ್ ಚಾಲನೆ; ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ