ಬ್ಯಾಂಕ್ ಗಳ ವಿಲೀನ; ನಿಮ್ಮ ಖಾತೆಗಳ ಮೇಲೆ ಬೀರುವ ಪರಿಣಾಮಗಳೇನು? ನೀವು ಮಾಡಬೇಕಾದ ಕೆಲಸವೇನು? ಎಸ್ ಬಿಐ ಬೃಹತ್ ವಿಲೀನದ ಬಳಿಕ ಇದೀಗ ಕೇಂದ್ರ ಸರ್ಕಾರ ಮೂರನೇ ಸುತ್ತಿನ ಬ್ಯಾಂಕ್‌ ವಿಲೀನ ಘೋಷಣೆ ಮಾಡಿದೆ. ಈ ಮೂಲಕ 27 ಸಾರ್ವಜನಿಕ ಬ್ಯಾಂಕುಗಳ ಜಾಗದಲ್ಲಿ ಇನ್ನು ಮುಂದೆ ಕೇವಲ 12 ಬ್ಯಾಂಕ್ ಗಳು ಕಾರ್ಯಚರಿಸಲಿವೆ. ನವದೆಹಲಿ: ಎಸ್ ಬಿಐ ಬೃಹತ್ ವಿಲೀನದ ಬಳಿಕ ಇದೀಗ ಕೇಂದ್ರ ಸರ್ಕಾರ ಮೂರನೇ ಸುತ್ತಿನ ಬ್ಯಾಂಕ್‌ ವಿಲೀನ ಘೋಷಣೆ ಮಾಡಿದೆ. ಈ ಮೂಲಕ 27 ಸಾರ್ವಜನಿಕ ಬ್ಯಾಂಕುಗಳ ಜಾಗದಲ್ಲಿ ಇನ್ನು ಮುಂದೆ ಕೇವಲ 12 ಬ್ಯಾಂಕ್ ಗಳು ಕಾರ್ಯಚರಿಸಲಿವೆ.ಈ ಹಿಂದೆ ಕೇಂದ್ರ ಸರಕಾರ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌ ಅನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಜೊತೆ ವಿಲೀನ ಮಾಡಿತ್ತು. ಎರಡನೇ ಸುತ್ತಿನಲ್ಲಿ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ನ್ನು ಬ್ಯಾಂಕ್‌ ಆಫ್‌ ಬರೋಡದಲ್ಲಿ ವಿಲೀನಗೊಳಿಸಿತ್ತು. ಇದೀಗ ಮೂರನೇ ಸುತ್ತಿನಲ್ಲಿ ಹಲವು ಬ್ಯಾಂಕ್‌ ಗಳ ವಿಲೀನವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಒರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಮತ್ತು ಯುನೈಟೆಡ್‌ ಬ್ಯಾಂಕ್‌ಗಳು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನೊಂದಿಗೆ ವಿಲೀನಗೊಳ್ಳಲಿದ್ದು, ಅಂತೆಯೇ ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳ್ಳಲಿದ್ದರೆ, ಕಾರ್ಪೊರೇಷನ್‌ ಬ್ಯಾಂಕ್‌ ಮತ್ತು ಆಂಧ್ರಾ ಬ್ಯಾಂಕ್‌ ಗಳು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದೊಳಕ್ಕೆ ಸೇರಲಿವೆ. ಇದೇ ವೇಳೆ ಅಲಹಾಬಾದ್‌ ಬ್ಯಾಂಕ್‌ ಇಂಡಿಯನ್‌ ಬ್ಯಾಂಕ್‌ನಲ್ಲಿ ವಿಲೀನಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ.ಹಾಗಾದರೇ ಈ ಬ್ಯಾಂಕ್ ಗಳ ವಿಲೀನ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆಯೇ.. ಗ್ರಾಹಕರು ಏನೆಲ್ಲಾ ಮುಂಜಾಗ್ರತೆ ಕ್ರಮ ವಹಿಸಬೇಕು. ಇಲ್ಲಿದೆ ಮಾಹಿತಿಬ್ಯಾಂಕ್ ಗಳ ವಿಲೀನದಿಂದ ಒಂದೇ ಲಾಭವೆಂದರೆ ಬ್ಯಾಂಕ್‌ ಶಾಖೆಗಳ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ಬ್ಯಾಂಕಿಂಗ್‌ ಸಂಬಂಧಿ ಕೆಲಸಗಳು ಸ್ವಲ್ಪ ಸುಲಭವಾಗುತ್ತವೆ. ಉದಾಹರಣೆಗೆ ಈ ವಿಲೀನದೊಂದಿಗೆ ಪಿಎನ್‌ಬಿ ಬ್ಯಾಂಕ್‌ ಶಾಖೆಗಳ ಸಂಖ್ಯೆ 11,437ಕ್ಕೆ ಏರಿಕೆಯಾಗಲಿದ್ದು, ಸಾರ್ವಜನಿಕ ರಂಗದ ಎರಡನೇ ಅತೀ ದೊಡ್ಡ ಬ್ಯಾಂಕ್‌ ಎಂಬ ಹೆಗ್ಗಳಿಕೆ ಪಡೆಯಲಿದೆ. ಕೆನರಾ ಬ್ಯಾಂಕ್‌ ಜೊತೆ ಸಿಂಡಿಕೇಟ್‌ ಬ್ಯಾಂಕ್, ಕಾರ್ಪೊರೇಷನ್‌ ಬ್ಯಾಂಕ್‌ ಜೊತೆ ಎರಡು ಬ್ಯಾಂಕ್ ವಿಲೀನಆರ್ ಬಿಐಗೆ ಕೊನೆಗೂ ಸಿಕ್ಕಿತು ದೇಶದ ಆರ್ಥಿಕತೆ ಕುಸಿತಕ್ಕೆ ಕಾರಣ; ಅದರ ಪುನಶ್ಚೇತನ ಹೇಗೆ?